ಧಾರವಾಡ : ಧಾರವಾಡದ ಕಟ್ಟಡ ಕುಸಿತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸರಕಾರ ಕೇವಲ 2 ಲಕ್ಷ ರೂ.ಪರಿಹಾರ ಕೊಟ್ಟು ಕೈ ತೋಳೆದುಕೊಂಡರೆ ಸಾಲದು. ಪರಿಹಾರದ ಮೊತ್ತವನ್ನು 10 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೋರವರ ಆಗ್ರಹಿಸಿದ್ದಾರೆ.
ಅವರು ಭಾನುವಾರ ರಾತ್ರಿ ಬನಶ್ರೀ ಹಿತಾಭಿವ್ರದ್ದಿ ಸಂಘದ ವತಿಯಿಂದ ದೊಡ್ಡನಾಯಕನ ಕೊಪ್ಪದಲ್ಲಿ ಕಟ್ಟಡ ದುರಂತದಲ್ಲಿ ಮ್ರತಪಟ್ಟವರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಒಂದು ವೇಳೆ ಸರಕಾರ ಸೂಕ್ತ ಪರಿಹಾರ ನೀಡದೆ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಟ್ಟಡ ದುರಂತದಲ್ಲಿ ಒಟ್ಟು ಈವರೆಗೆ 19 ಜನ ಪ್ರಾಣ ಕಳೇದುಕೊಂಡಿದ್ದಾರೆ. 57 ಜನರಿಗೆ ವಿವಿಧ ಸ್ವರೂಪದ ಗಾಯಗಳಾಗಿವೆ. ಮೃತಪಟ್ಟವರಿಗೆ 10 ಲಕ್ಷ ಪರಿಹಾರ, ಗಾಯಾಳುಗಳಿಗೆ 2 ಲಕ್ಷದಿಂದ 5 ಲಕ್ಷದವರಗೆ ಪರಿಹಾರ ನೀಡಲೇ ಬೇಕು ಎಂದು ಆಗ್ರಹಿಸಿದರು.
ಇದರೊಂದಿಗೆ ಕಟ್ಟಡ ಖರೀದಿಸಿದ್ದವರಿಗೆ ದುಡ್ಡು ಮರಳಿಸುವುದು. ಜೊತೆಗೆ ಅಲ್ಲಿ ಹೂಡಿಕೆ ಮಾಡಿದ್ದ ಕೋಟ್ಯಾಂತರ ರೂಪಾಯಿ ನಷ್ಟ ಭರಿಸಿಕೊಡುವ ಕೆಲಸ ಕಟ್ಟಡ ಮಾಲೀಕರಿಂದ ಹಾಗೂ ರಾಜ್ಯ ಸರಕಾರದಿಂದ ಆಗಬೇಕಿದೆ ಎಂದು ಹೇಳಿದರು.
ಇದರೊಂದಿಗೆ ಕಟ್ಟಡಕ್ಕೆ ಪರವಾನಿಗೆ ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪ್ರೊ.ಕೊಟ್ರೇಶ, ವಿ.ಆರ್.ಭಜಂತ್ರಿ, ಜಿ.ಆರ್.ಕೋಡಗ, ಎಸ್.ಬಿ.ರಡ್ಡೇರ, ಬಿ.ಬಿ.ಕಮತಿ, ಬಸವರಾಜ ಕೋರವರ, ಸುಂಗಲಾ ಕೋರವರ, ಶಾರದಾ ತೆಲಸಂಗದ, ಜಯಶ್ರೀ ಕುಂಬಾರ ಸೇರಿದಂತೆ ಅನೇಕರು ಇದ್ದರು.