ಹುಬ್ಬಳ್ಳಿ-ಧಾರವಾಡ : ಮೋಬೈಲ್ ಕಾಲ ಮಾಡಿ ಹಿಂದಿಯಲ್ಲಿ ಮಾತನಾಡುತ್ತಾ ಮೊಬೈಲಿಗೆ ಬಂದ ಯುಟಿಪಿ ನಂಬರನ್ನು ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿಕೊಂಡ ಎರಡು ಪ್ರತ್ಯೇಕ ಘಟನೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಸಾಧನಕೇರಿ ನಿವಾಸಿ ವಿನಾಯಕ ಮಂಜಪ್ಪ ಇಚ್ಚಂಗಿ ಇವರಿಗೆ ಆಗಸ್ಟ್ ೬ ರಂದು ಮಧ್ಯಾಹ್ನ ೧೨-೩೦ ಗಂಟೆ ಸುಮಾರಿಗೆ ಮೋಬೈಲ್ ಕಾಲ ಮಾಡಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದಾರೆ.
ಈ ವೇಳೆ ಅವರ ಮೊಬೈಲಿಗೆ ಬಂದ ಯುಟಿಪಿ ನಂಬರನ್ನು ಪಡೆದುಕೊಂಡು ಎಸ್ಬಿಐ ಖಾತೆಯಲ್ಲಿದ್ದ ೩೯೪೮೮/- ರೂ ಹಣವನ್ನು ಹಂತ ಹಂತವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿ ಯಾಮಾರಿಸಿದ್ದಾರೆ.
ಈ ಬಗ್ಗೆ ವಿನಾಯಕ ಮಂಜಪ್ಪ ಇಚ್ಚಂಗಿ ಇವರು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿಯ ಸೈಬರ ಕ್ರೈಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ತನಿಖೆ ಕೈಕೊಳ್ಳಲಾಗಿದೆ.
ಅದೇ ರೀತಿ ಹುಬ್ಬಳ್ಳಿಯ ಉಣಕಲ್ ನ ಬಾರಕೇರ ಓಣಿ ನಿವಾಸಿ ಅಶ್ವಿನಿ ಸಿದ್ದಪ್ಪ ಹೆಬ್ಬಳ್ಳಿ ಅವರಿಗೆ
ಆ. 6ರಂದು ರಂದು ರಾತ್ರಿ ೧೧-೫೩ ಗಂಟೆಯಿಂದ ಆ. 7ರ ರಾತ್ರಿ ೧೨-೦೬ ಗಂಟೆ ನಡುವಿನ ಅವಧಿಯಲ್ಲಿ ಇವರ ಅಕೌಂಟ ನಂಬರದಿಂದ ಅವರಿಗೆ ಗೊತ್ತಾಗದಂತೆ ಹಂತ ಹಂತವಾಗಿ ಒಟ್ಟು ೪೦,೦೮೦/- ನಗದು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಈ ಬಗ್ಗೆ ಅಶ್ವಿನಿ ಸಿದ್ದಪ್ಪ ಹೆಬ್ಬಳ್ಳಿ ಇವರು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿಯ ಸೈಬರ ಕ್ರೈಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.