ನವದೆಹಲಿ PRAJAKIRAN.COM : ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಚಲಿಸುವ ಬಸ್ ನಿಂದ ಎಸೆದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪಟಿಯಾಲ್ ಹೌಸ್ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ದಿನಾಂಕವೂ ಪ್ರಕಟಿಸಿದೆ.
ಜ. 22ರಂದು ಬೆಳಗ್ಗೆ 7 ಗಂಟೆಗೆ ನಾಲ್ಕು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ದೆಹಲಿಯ ನಿರ್ಭಯಾ ಗ್ಯಾಂಗ್ ರೇಪ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕಟಿಸಿದ್ದಾರೆ.
ಅಕ್ಷಯ್, ಮುಖೇಶ್, ವಿನಯ್, ಪವನ್ ಅವರನ್ನು ಅಪರಾಧಿಗಳೆಂದು ಘೋಷಿಸಿದ್ದಾರೆ. ತಿಹಾರ್ ಜೈಲಿನಿಂದಲೇ ನಾಲ್ವರು ಆರೋಪಿಗಳ ವೀಡಿಯೋ ಕಾನ್ಪರೆನ್ಸ್ ಮೂಲಕ ಅವರ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ಡೆತ್ ವಾರೆಂಟ್ ಜಾರಿ ಮಾಡಿದರು.
ಅಲ್ಲದೆ, ಆರೋಗ್ಯ ವಿಚಾರಣೆ ನಡೆಸಿ, ಕ್ಯುರೇಟಿವ್ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಪಡೆದರು. ಒಬ್ಬರೊಂದಿಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ವಿಚಾರಣೆ ನಡೆಸಿದ ಬಳಿಕ ಪಟಿಯಾಲ್ ಹೌಸ್ ಕೋರ್ಟ್ ಅತ್ಯಾಚಾರಿಗಳಿಗೆ ನೇಣು ಕುಣಿಕೆಗೆ ಎರಿಸುವಂತೆ ಶಿಕ್ಷೆ ಪ್ರಕಟಿಸಿದರು.
ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಕೆ ಇಲ್ಲವೇ ಸುಪ್ರೀಂಕೋರ್ಟ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಪಟಿಯಾಲಾ ಹೌಸ್ ಕೋರ್ಟ್ ಹದಿನಾಲ್ಕು ದಿನಗಳ ಕಾಲ ಅವಕಾಶ ಕೊಟ್ಟಿದ್ದಾರೆ. ನಾಲ್ವರ ಆರೋಗ್ಯ ತಪಾಸಣೆ ಮಾಡಿ ವೈದ್ಯರ ಸಮ್ಮುಖದಲ್ಲಿ ನ್ಯಾಯಾಧೀಶರ ಎದುರುಗಡೆ ಗಲ್ಲು ಶಿಕ್ಷೆಗೆ ಗುರಿಪಡಿಸಲಿದ್ದಾರೆ.
ಡಿ.16, 2012ರಂದು ರಾತ್ರಿ 11 ಗಂಟೆಗೆ ಚಲಿಸುವ ಬಸ್ ನಲ್ಲಿ ನಿರ್ಭಯಾ ಮೇಲೆ ಎರಗಿದ ಕ್ರೂರಿಗಳು ಸಾಮೂಹಿಕ ಅತ್ಯಾಚಾರ ಮಾಡಿ, ಆನಂತರ ಚಲಿಸುವ ಬಸ್ ನಿಂದ ಎಸೆದು ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.
ಈ ಹಿಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಕೂಡ ಕ್ಷಮಾದಾನ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬಾರದು. ಅತ್ಯಾಚಾರಿ ಆರೋಪಿಗಳಿಗೆ ಕೇಂದ್ರ ಸರಕಾರ ಕರುಣೆ ತೋರಿಸಬಾರದು ಎಂದು ಸಲಹೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಕ್ಯೂರೇಟಿವ್ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ಅಪರಾಧಿಗಳ ಪರ ವಕೀಲರು ತಿಳಿಸಿದ್ದಾರೆ.
ಶಿಕ್ಷೆ ಪ್ರಕಟಿಸುತ್ತಿದ್ದಂತೆ ಇದು ಭಾರತದ ಗೆಲುವು, ಕಾನೂನಿಗೆ ಮೇಲೆ ನಂಬಿಕೆ ಹೆಚ್ಚಿದೆ. ಅತ್ಯಾಚಾರಿಗಳು ಗಲ್ಲು ಶಿಕ್ಷೆಯಿಂದ ದುಷ್ಟರು ಹೆದರುತ್ತಾರೆ ಎಂದು ನಿರ್ಭಯಾ ತಾಯಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.