ಮುಂಬೈ PRAJAKIRAN.COM : ಜೈಲಿಗೆ ಹೋಗುವುದನ್ನುತಪ್ಪಿಸಿಕೊಳ್ಳಲು ಎನ್ ಸಿ ಪಿ ನಾಯಕ ಅಜಿತ್ ಪವಾರ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಅವರು ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಅಜಿತ್ ಪವಾರ್ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶರದ ಪವಾರ್ ಗೆ ದ್ರೋಹ ಬಗೆದ ಅಜಿತ್ ಪವಾರ್ ನಡೆ ಬಗ್ಗೆ ನಮಗೆ ಮೊದಲೇ ಅನುಮಾನವಿತ್ತು. ನಿನ್ನೇ ರಾತ್ರಿ ಒಂಬತ್ತು ಗಂಟೆಯವರೆಗೆ ಶಿವಸೇನೆ-ಕಾಂಗ್ರೆಸ್ -ಎನ್ ಸಿಪಿ ಸರಕಾರ ರಚನೆಗೆ ಮುಂದಾಗಿದ್ದ ಎಂದು ಹರಿಹಾಯ್ದರು.
ರಾತ್ರೋ ರಾತ್ರಿ ಬೆನ್ನಿಗೆ ಚೂರಿ ಹಾಕುವಂತ ಕೆಲಸ ಇವರು ಮಾಡಿದ್ದಾರೆ. ಇದು ಮಹಾರಾಷ್ಟ್ರ ಜನತೆಗೆ ಹಾಗೂ ಎನ್ ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಂತೆ ಎಂದು ಕುಟುಕಿದಿದ್ದಾರೆ.
ನಿನ್ನೇ ರಾತ್ರಿವರೆಗೆ ನಮ್ಮೊಂದಿಗೆ ಇದ್ದು ಬೆಂಬಲ ನೀಡಿದ್ದರೂ, ಅವರು ಪಾಪ ಮಾಡಿದ್ದರು. ಹೀಗಾಗಿ ನಮ್ಮ ಕಣ್ಣಲ್ಲಿ ಕಣ್ಣು ಹಾಕಿ ಮಾತನಾಡಲು ಆಗಿರಲಿಲ್ಲ. ಅವರಿಗೆ ಪಾಪ ಪ್ರಜ್ಞೆ ಕಾಡುತ್ತಿತ್ತು. ಆನಂತರ ಅವರು ನಾಪತ್ತೆಯಾಗಿದ್ದರು ಎಂದು ದೂರಿದರು.
ಆನಂತರ ಬಿಜೆಪಿ ರಾಜಭವನ ದುರುಪಯೋಗ ಪಡಿಸಿಕೊಂಡ ಬಿಜೆಪಿ ನಾಯಕರು ದಿಢೀರ್ ಆಗಿ ಸರಕಾರ ರಚನೆ ಮಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಶಿವಸೇನೆಯ ಮುಖ್ಯಸ್ಥ ಸಂಜಯ ರಾವತ್ ಆಪಾದಿಸಿದರು.