ಜಿಲ್ಲೆ

ಮಾರುತಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

ಧಾರವಾಡ PRAJAKIRAN.COM : ಧಾರವಾಡದ ಸಾರಸ್ವತಪುರದ ಶ್ರೀ ಮಾರುತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕಾರ್ತಿಕೋತ್ಸವವು ಸಾವಿರಾರು ಭಕ್ತರು ಸಡಗರ ಸಂಭ್ರಮದಿಂದ ದೀಪ ಬೆಳಗಿಸಿ ಭಕ್ತಿ, ಶ್ರದ್ದೆ ಮೆರೆದರು.

ಸಾನ್ನಿಧ್ಯವಹಿಸಿ ಮಾತನಾಡಿದ ಆಧ್ಯಾತ್ಮಿಕ ಚಿಂತಕ ಪ್ರಶಾಂತ ರಾಜಗುರು, ಅಜ್ಞಾನದ ಕತ್ತಲೆಯನ್ನು ತೊಡೆದು ಸುಜ್ಞಾನದ ಬೆಳಕಿನೆಡೆಗೆ ಸಾಗುವುದೇ ನಿಜವಾದ ಧರ್ಮ ಮಾರ್ಗ ಎಂದು ಹೇಳಿದರು.

ಈ ವಿಶ್ವವೇ ನಮ್ಮ ಕುಟುಂಬ ಎನ್ನುವ ಪರಿಕಲ್ಪನೆ ಇರುವ ಏಕೈಕ ಸಂಸ್ಕೃತಿ ನಮ್ಮದಾಗಿದ್ದು ಇದಕ್ಕೆ ದೇವರ ಮನೆ ಎಂದು ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಸನಾತನ ಧರ್ಮದ ಆಧಾರದ ಮೇಲೆ ಜೀವನ ಸಾಗುತ್ತಿದ್ದು ಸಹಸ್ರಾರು ವರ್ಷಗಳಿಂದ ಸತತವಾಗಿ ಸಂಸ್ಕೃತಿ ಉಳಿದುಕೊಂಡು ಬಂದಿದೆ ಎಂದರು.

ಬೇರೆ ದೇಶಗಳ ಸಂಸ್ಕೃತಿಗಳು ಕೇವಲ ಪ್ರಾಪಂಚಿಕ ಸುಖ ನೀಡಿದರೆ ಭಾರತೀಯ ಸಂಸ್ಕೃತಿ ಪಾರಮಾರ್ಥಿಕ ಸುಖ ನೀಡುತ್ತದೆ.

ವಿಶ್ವದಲ್ಲಿ ಇಂದು ನಾವು ಕಾಣುತ್ತಿರುವ ಸಾಕಷ್ಟು ಸಮಸ್ಯೆಗಳಿಗೆ ಇಲ್ಲಿನ ವೇದ ಉಪನಿಷತ್ತು, ಭಾಗವತಗಳಲ್ಲಿ ಪರಿಹಾರ ಇದ್ದು ಅದನ್ನು ಬಳಸಿಕೊಂಡು ಶಾಂತಿ ಸ್ಥಾಪನೆ ಮಾಡುವ ಮೂಲಕ ಜ್ಞಾನದ ಬೆಳಕನ್ನು ವಿಶ್ವಕ್ಕೆ ಮತ್ತೊಂದು ಬಾರಿ ಪಸರಿಸಬೇಕು ಎಂದರು.

ಈ ವೇಳೆ ಮಾತನಾಡಿದ ಯುವ ಮುಖಂಡ ಮಹೇಶ ನೇಕಾರ ಯುವಕರು ಕೇವಲ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ಸಹ ಅದನ್ನು ಕೊಡುಗೆಯಾಗಿ ನೀಡಬೇಕು ಎಂದರು.

ಕಾರ್ಯಕ್ರಮದ ನಂತರ ಶ್ರೀ ಮಾರುತಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ವೀರಯ್ಯಸ್ವಾಮಿ, ಸಚಿನ ಸುಣಗಾರ, ಮನೋಜ, ಆಕಾಶ, ಮಂಜುನಾತ ಚೆಟ್ಟೆರ, ಅಮೃತ ಮಲ್ಲಿಗವಾಡ ಇತರರು ಇದ್ದರು.

 

Please follow and like us:

Leave a Reply

Your email address will not be published. Required fields are marked *