ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಶಿವಗಿರಿಯಲ್ಲಿ ಸಣ್ಣ ಸ್ಟೇಶನರಿ ಅಂಗಡಿ ನಡೆಸುತ್ತಿರುವ ಹರೀಶ ಹೆಗಡೆ ಕಳೇದ ನಾಲ್ಕು ವರ್ಷದಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈಗಾಗಲೇ ಮೂರು ಸಲ ಕಿಮಿಯೋಥೆರಪಿ ಆಗಿದ್ದು, ಕಳೆದ ಹಲವು ವರ್ಷಗಳಲ್ಲಿ ಅವರ ಆಸ್ಪತ್ರೆ ವೆಚ್ಚ ಬರೋಬ್ಬರಿ ಒಂಬತ್ತು ಲಕ್ಷ ದಾಟಿದೆ. ಇದರಿಂದ ತೀವ್ರವಾಗಿ ನೊಂದಿರುವ ಅವರಿಗೆ ಸಂಸಾರ ನೌಕೆ ಸಾಗಿಸುವುದು ಕಷ್ಟಕರವಾಗಿದೆ. ಎರಡು ಪುಟ್ಟ ಕಂದಮ್ಮಗಳಿದ್ದು, ಧಾರವಾಡದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಅವರಿಗೆ […]
Tag: #dharwad
ಕಳೆದ ಹಲವು ವರ್ಷಗಳಿಂದ ಸಾಮೂಹಿಕ ನಕಲು: ಬಾಬುರಾವ್ ಶೇಗುಣಸಿ ಮಾಲೀಕತ್ವದ ದೂರಶಿಕ್ಷಣ ಕೇಂದ್ರದ ಯಡವಟ್ಟು
ಹುಬ್ಬಳ್ಳಿ prajakiran.com : ವಾಣಿಜ್ಯ ನಗರಿ ಹುಬ್ಬಳ್ಳಿಯ ಗುರುನಾಥಾರೂಢ ನಗರದ ಮಹಾರಾಣಿ ಕಾಲೇಜಿನಲ್ಲಿ ಕುವೆಂಪು ವಿವಿ ದೂರ ಶಿಕ್ಷಣ ಕೇಂದ್ರ ನಡೆಸುತ್ತಿದ್ದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆಯುತ್ತಿದ್ದ ವೀಡಿಯೋ ವೈರಲ್ ಆಗಿದೆ. ಅಭ್ಯರ್ಥಿಗಳು ಕೈಯಲ್ಲಿ ಪುಸ್ತಕ ಹಿಡಿದು, ಪರಸ್ಪರ ರ್ಚಚಿಸಿ ಉತ್ತರ ಬರೆಯುತ್ತಿದ್ದ ದೃಶ್ಯ ವೀಡಿಯೋದಲ್ಲಿವೆ. ಕಳೆದ 4 ದಿನಗಳಿಂದ ಪರೀಕ್ಷೆ ನಡೆಯುತ್ತಿದ್ದು, ನಿರಂತರವಾಗಿ ಸಾಮೂಹಿಕ ನಕಲು ನಡೆಯುತ್ತಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಅಧೀಕ್ಷಕರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. […]
ಕರ್ನಾಟಕ ಕುಸ್ತಿ ಹಬ್ಬಕ್ಕೆ ರಾಜ್ಯ ಸರಕಾರದಿಂದ ಕೇವಲ ೨ ಕೋಟಿ ಅನುದಾನ : ಪ್ರಾಯೋಜಕತ್ವ ನೀಡಿ ಎಂದ ಜಿಲ್ಲಾಧಿಕಾರಿ ದೀಪಾ ಚೋಳನ್
ಧಾರವಾಡ prajakiran.com : ಕರ್ನಾಟಕ ಕುಸ್ತಿ ಹಬ್ಬದ ಆಯೋಜನೆಗೆ ರಾಜ್ಯ ಸರ್ಕಾರ ಕೇವಲ ೨ ಕೋಟಿ ಅನುದಾನ ನೀಡಲಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು. ಸಂಘ, ಸಂಸ್ಥೆಗಳು ಕುಸ್ತಿ ಹಬ್ಬಕ್ಕೆ ವಸ್ತು ರೂಪದ ದೇಣಿಗೆ ಮೂಲಕ ಪ್ರಾಯೋಜಕತ್ವ ನೀಡಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ. ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಸ್ತಿ ಹಬ್ಬದ ಸಮಿತಿಗಳ ಹಾಗೂ ಬ್ಯಾಂಕ್ ಮುಖ್ಯಸ್ಥರ, ಹೋಟೆಲ್ ಹಾಗೂ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಜರುಗಿಸಿ ಮಾತನಾಡಿದರು. ಬರುವ ಫೆಬ್ರವರಿ ೨೨, […]
ನಕಲಿ ನಂಬರ್ ಹಾಕಿಕೊಂಡು ವಾಹನ ಚಾಲನೆ : ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ಟಾಟಾ ಸಫಾರಿ ಪೊಲೀಸರ ವಶಕ್ಕೆ
ಹುಬ್ಬಳ್ಳಿ ಧಾರವಾಡ prajakiran.com : ಜೆಡಿಎಸ್ ಮುಖಂಡ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಕಳೇದ ಹಲವು ವರ್ಷಗಳಿಂದ ತಮ್ಮ ವಾಹನಕ್ಕೆ ನಕಲಿ ನಂಬರ್ ಹಾಕಿಕೊಂಡು ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಧಾರವಾಡ ಸಂಚಾರ ಠಾಣೆಯ ಪೊಲೀಸರು ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡನಾಗಿರುವ ಶ್ರೀಕಾಂತ ಜಮನಾಳ ಟಾಟಾ ಸಫಾರಿ ವಾಹನ ವಶಕ್ಕೆ ತೆಗೆದುಕೊಂಡು ದಾಖಲೆ ಪರಿಶೀಲನೆ […]
ಭಾರತೀಯ ಜೀವ ವಿಮಾ ನಿಗಮ ಖಾಸಗಿಕರಣಕ್ಕೆ ಆಕ್ರೋಶ
ಧಾರವಾಡ prajakiran.com : ಸಾರ್ವಜನಿಕ ವಲಯದ ಭಾರತೀಯ ಜೀವ ವಿಮಾ ನಿಗಮ ಖಾಸಗಿಕರಣಕ್ಕೆ ಷೇರು ಮಾರಾಟ ಮಾಡಲು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ವಿಮಾ ನಿಗಮದ ಅಧಿಕಾರಿಗಳು, ನೌಕರರು ಹಾಗೂ ಪ್ರತಿನಿಧಿಗಳು ಧಾರವಾಡ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮಆಕ್ರೋಶ ವ್ಯಕ್ತಪಡಿಸಿದರು. ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷರಾದ ಉದ್ಭವ ಗದಗಕರ, ಅಭಿವೃದ್ದಿ ಅಧಿಕಾರಿ ಎಲ್ ಎ ನಾಯಕ, ನಿವೃತ್ತ ನೌಕರರಾದ ಬಿ.ಎನ್. ಪೂಜಾರಿ, ಎ.ಎಂ. ಖಾನ , ಮೋಹನ ಕದಂ […]
ಬಿಆರ್ ಟಿ ಎಸ್ ಬಸ್ ನಲ್ಲಿ ಸಂಚರಿಸಿದ ಉಪರಾಷ್ಟ್ರಪತಿ
ಧಾರವಾಡ Prajakiran.com : ನಗರಗಳ ಸುಸ್ಥಿರ ಅಭಿವೃದ್ಧಿಗೆ ಹೆಚ್ ಡಿ ಬಿ ಆರ್ ಟಿ ಎಸ್ ನಂತಹ ಯೋಜನೆಗಳು ಪೂರಕ .ಹುಬ್ಬಳ್ಳಿ ಧಾರವಾಡ ಅವಳಿನಗರ ಸುಂದರವಾಗಲು ಇದು ವರದಾನವಾಗಲಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು. ಅವರು ಭಾನುವಾರ ಹೊಸೂರಿನ ರಾಯ್ಕರ್ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ ( ಹೆಚ್ ಡಿ ಬಿ ಆರ್ ಟಿ ಎಸ್ ) ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಜ್ಯದ ಎಲ್ಲೆಡೆ ಇಂತಹ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ […]
ಲಂಚದ ಬೇಡಿಕೆ ಇಟ್ಟಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸಿಬಿ ಬಲೆಗೆ
ಧಾರವಾಡ prajakiran.com : ಮಕ್ಕಳ ಹಕ್ಕುಗಳ ಉಲ್ಲಂಘನೆ ವಿಷಯವಾಗಿ ಶಾಲೆಯ ಆಡಳಿತ ಮಂಡಳಿಗೆ ಲಂಚದ ಬೇಡಿಕೆ ಇಟ್ಟಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಯ ಸಾಂಸ್ಥಿಕ ರಕ್ಷಣಾಧಿಕಾರಿ (ಹೊರ ಗುತ್ತಿಗೆ) ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಶನಿವಾರ ರಾತ್ರಿ ನಡೆದಿದೆ. ಈ ಕುರಿತು prajakiran.com ದೊಂದಿಗೆ ಮಾತನಾಡಿದ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ವಿಜಯಕುಮಾರ ಬಿಸನಳ್ಳಿ ಅವರು, ಈ ಸಂಬಂಧ ನಿಂಗಪ್ಪ ಮಡಿವಾಳರಅವರನ್ನು ಬಂಧಿಸಿ, ಅವರಿಂದ 35 ಸಾವಿರ ರೂಪಾಯಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ […]
ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯೋಧ
ಜಮ್ಮು ಕಾಶ್ಮೀರ prajakiran.com : ಯೋಧನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ. ಶ್ರೀನಗರದ ಅನಂತನಾಗ ಜಿಲ್ಲೆಯ ಸಿಆರ್ ಪಿ ಎಫ್ ಯೋಧ ಈಶ್ವರ್ ಯಲ್ಲಪ್ಪ ಸುರಣಗಿ ಅವರು ಸಾವಿಗೆ ಶರಣಾದ ಯೋಧರಾಗಿದ್ದಾರೆ. ಅವರು ಗುರುವಾರ ಬೆಳಗಿನ ಜಾವ ಮರಣ ಹೊಂದಿದ್ದಾರೆ ಎಂಬ ಸುದ್ದಿ ಸೇನೆ ಸಿಬ್ಬಂದಿ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಸಾವಿನ ಸುದ್ದಿ ಗ್ರಾಮಸ್ಥರಿಗೆ ಮುಟ್ಟುತ್ತಿದ್ದಂತೆ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಈಶ್ವರ್ ಯಲ್ಲಪ್ಪ […]
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕ್ಲಾಸಿಕ್‌ನಲ್ಲಿ ಕಾರ್ಯಾಗಾರ
ಧಾರವಾಡ prajakiran.com : ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತರಗತಿಯ ಪಠ್ಯಗಳ ಜೊತೆಗೆ ವಿಷಯ ಪರಿಣಿತರ ಮಾರ್ಗದರ್ಶನವನ್ನು ಪಡೆದು ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಹೇಳಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಲಾಸಿಕ್ ಕೆ.ಎ.ಎಸ್. ಮತ್ತು ಐ.ಎ.ಎಸ್. ಸ್ಟಡಿ ಸರ್ಕಲ್ ಹಾಗೂ ಸ್ಪರ್ಧಾ ಸ್ಫೂರ್ತಿ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಕ್ಲಾಸಿಕ್ ಸಂಸ್ಥೆಯಲ್ಲಿ ನಡೆದ ಮೂರು ದಿನಗಳ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಧಾರವಾಡ […]
ಡಕೋಟಾ ರಾಜಹಂಸ : ಪ್ರಯಾಣಿಕರ ಜೀವನದ ಜೊತೆಗೆ ಚೆಲ್ಲಾಟವಾಡುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ …!
ಧಾರವಾಡ Prajakiran.com : ಧಾರವಾಡ-ಬೆಳಗಾವಿ ಮಧ್ಯೆ ಸಂಚರಿಸೋ ನಾನ್‌ಸ್ಟಾಪ್ ರಾಜಹಂಸ ಬಸ್‌ಗಳು ಪದೇ ಪದೇ ದಾರಿ ಮಧ್ಯೆ ಕೆಟ್ಟು ನಿಲ್ಲೋದ್ರಿಂದ ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಇಂದು ಸಹ ಧಾರವಾಡದಿಂದ ಬೆಳಗಾವಿಗೆ ಹೊರಟಿದ್ದKA-42, F-957 ನಂಬರ್‌ನ ಬಸ್ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ತೇಗೂರು ಕ್ರಾಸ್ ಬಳಿ ಕೆಟ್ಟು ನಿಂತಿದೆ. ಇದರಿಂದಾಗಿ ಪ್ರಯಾಣಿಕರು ಹಲವು ಗಂಟೆಗಳ ಕಾಲ ವಿಲವಿಲ ಒದ್ದಾಡಿದರು. ಈ ಬಸ್‌ನಲ್ಲಿ ಹೆಚ್ಚು ಜನ ನೌಕರರೇ ಪ್ರಯಾಣಿಸುತ್ತಾರೆ. ಪದೇ ಪದೇ ಇದೇ ರೀತಿ ಆಗುತ್ತಿರೋದ್ರಿಂದ ಅವರು […]