ಜಿಲ್ಲೆ

ಧಾರವಾಡದ ಭಾವಿಕಟ್ಟಿ ಪ್ಲಾಟ್ಲ್ ರಾಜ್ ನಾಲೆ ಒತ್ತುವರಿ ತೆರವು

ಧಾರವಾಡ : ವಿವಿಧ ಬಡಾವಣೆಗಳಿಂದ ಬಂದು ಸೇರುವ ಮಳೆನೀರು ಹೋಗಲು ಬಿಟ್ಟಿರುವ ರಾಜ್‌ನಾಲೆಯನ್ನು ಭಾವಿಕಟ್ಟಿ ಪ್ರದೇಶದಲ್ಲಿ ಅಕ್ರಮಿಸಿ ಮನೆ ಹಾಗೂ ಶೆಲ್ಟರ್ ಕಟ್ಟಿಕೊಂಡಿರುವುದನ್ನು ತೆರವುಗೊಳಿಸುವ ಕಾರ್ಯ ಮಂಗಳವಾರ ಆರಂಭಗೊಂಡಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ: ಸುರೇಶ್ ಇಟ್ನಾಳ ಹಾಗೂ ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಅವರು ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಕಲ್ಯಾಣ ನಗರ, ಜಯನಗರ, ಸಾಯಿನಗರ, ಶ್ರೀನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಮಳೆನೀರು ಹರಿದು ಹೋಗಿ ಕೆಲಗೇರಿ ಕೆರೆ ಸೇರಲು ಸೂಕ್ತ ಅಳತೆಯ ರಾಜ್‌ನಾಲಾ ಬಿಡಲಾಗಿದೆ.

ಆದರೆ ಬಾವಿಕಟ್ಟಿ ಪ್ಲಾಟ್ ಪ್ರದೇಶದ ಕೆಲವರು ಈ ರಾಜನಾಲಾ ಅತಿಕ್ರಮಿಸಿ ಒತ್ತುವರಿ ಮಾಡಿ ವಿವಿಧ ರೀತಿಯ ಕಟ್ಟಡ ಕಟ್ಟಿದ್ದಾರೆ. ಇದರಿಂದಾಗಿ ಮಳೆನೀರು ನಾಲಾದಲ್ಲಿ ಹರಿದು ಹೋಗದೇ ಮನೆಗಳನ್ನು ಹಾಗೂ ಖಾಲಿ ನಿವೇಶನಗಳಿಗೆ ನುಗ್ಗುತ್ತಿದೆ.

ಇದರಿಂದ ಜನರಿಗೆ ತುಂಬಾ ತೊದರೆಯಾಗಿರುವುದನ್ನು ಮನಗಂಡು. ಜೆ.ಸಿ.ಬಿ. ಬಳಸಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಈಗ ಬರುವ ನೀರು ಸರಾಗವಾಗಿ ಕೆಲಗೇರಿ ಕೆರೆ ಸೇರುವಂತೆ ಮಾಡುವುದು ಮೊದಲ ಆಧ್ಯತೆ ಆಗಿದ್ದು, ಸಮೀಕ್ಷೆ ಮೂಲಕ ರಾಜ್‌ನಾಲಾದ ೮ ಅಡಿ ಜಾಗೆ ಗುರುತಿಸಿ ಎಲ್ಲ ಅನಧಿಕೃತ ನಿರ್ಮಾಣಗಳನ್ನು ತೆಗೆದು ಹಾಕಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದರು

ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ ಮಾತನಾಡಿ, ಭಾವಿಕಟ್ಟಿ ಪ್ಲಾಟ್ ಪ್ರದೇಶ ತೆರವು ಕಾರ್ಯಾಚರಣೆಯಿಂದ ನಿರಾಶ್ರಿತರಾದವರಿಗೆ ಭಾವಿಕಟ್ಟಿ ಪ್ಲಾಟಿನ್ ಚನ್ನಬಸವೇಶ್ವರ ಪ್ರಾಥಮಿಕ ಶಾಲೆ ಹಾಗೂ ಶ್ರೀನಗರದ ಪರಿಸರ ಭವನದಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರವನ್ನು ಇಂದಿನಿಂದಲೇ ಆರಂಭಿಸಲಾಗಿದೆ ಎಂದು ಹೇಳಿದರು.

ಪಾಲಿಕೆಯ ವಲಯ ಅಧಿಕಾರಿ ಎಂ.ಬಿ. ಸಬರದ, ಭೂದಾಖಲೆಗಳ ತಾಲೂಕಾ ಸಹಾಯಕ ನಿರ್ದೆಶಕ ಕೆ.ಜಿ. ಲಟ್ಟಿ, ಮಾಜಿ ಕಾರ್ಪೊರೇಟರ್‌ಗಳಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಬಲರಾಮ ಕುಸುಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Please follow and like us:

Leave a Reply

Your email address will not be published. Required fields are marked *