ಧಾರವಾಡ prajakiran.com : ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ಐವರಲ್ಲಿ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಪಿ - 1505 , ಪಿ- 1506 , ಪಿ - 1507 , ಪಿ - 1508 ಹಾಗೂ ಪಿ - 1509 ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
ಪಿ- 1505 ಹಾಗೂ ಪಿ - 1506 ಇವರು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಇವರು ಮಾ18 ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು.
ಅಲ್ಲಿ ಮೇ 17 ರವರೆಗೆ ವಾಸವಾಗಿದ್ದರು . ಮೇ 17 ರ 5 ಗಂಟೆಗೆ ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೊ ಮೂಲಕ ಕರ್ನೂಲ್ನಲ್ಲಿಯ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 6:30 ಕ್ಕೆ ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು , ಮಾನ್ವಿ , ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ.
ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೊಸ್ಟ್ ದಾಟಿ ಮೇ 18 ರಂದು ಮುಂಜಾನೆ 8 ಗಂಟೆಗೆ ಹುಬ್ಬಳ್ಳಿ ತಲುಪಿರುತ್ತಾರೆ .
ಮೇ 18 ರಂದು ಮುಂಜಾನೆ 9 ಗಂಟೆಗೆ ಧಾರವಾಡ ತಲುಪಿರುತ್ತಾರೆ. ಅದೇ ದಿನ ಕುಟುಂಬದ ಎಲ್ಲಾ 4 ಜನ ಸದಸ್ಯರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ನಲ್ಲಿರಿಸಲಾಗಿರುತ್ತದೆ .
ಮೇ 20 ರಂದು ಪಿ - 1505 ಹಾಗೂ ಪಿ - 1506 ಇವರು ಕೋವಿಡ್ -19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .
ಪಿ - 1507 , ಪಿ - 1508 ಹಾಗೂ ಪಿ- 1509 ಇವರ ಪ್ರಯಾಣ ವಿವರ :
ಇವರು ಮಹಾರಾಷ್ಟ್ರದ ಮುಂಬಯಿ ಶಹರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ. ಮೇ 16 ರಂದು ರಾತ್ರಿ 11:30 ಕ್ಕೆ ಬಾಡಿಗೆ ಇನ್ನೊವಾ ವಾಹನ ಸಂಖ್ಯೆ : MH.04.ED.5367 ದ ಮೂಲಕ ಕುಟುಂಬದ 11 ಜನ ಸದಸ್ಯರು ಮುಂಬೈಯಿಂದ ಹೊರಟು ಮೇ 17 ರಂದು ರಾತ್ರಿ 8 ಗಂಟೆಗೆ ಕೊಲ್ಲಾಪುರ ಚೆಕ್ ಪೊಸ್ಟ್ ಹತ್ತಿರದಲ್ಲಿ ಊಟ ಮಾಡಿರುತ್ತಾರೆ .
ನಂತರ ರಾತ್ರಿ 11.30 ಕ್ಕೆ ಕೊಲ್ಲಾಪುರ ಚೆಕ್ ಪೊಸ್ಟ್ನಿಂದ ಹೊರಟು ಮೇ 18 ರಂದು ಮುಂಜಾನೆ 5 ಗಂಟೆಗೆ ಧಾರವಾಡ ತಲುಪಿರುತ್ತಾರೆ. ಅದೇ ದಿನ ಕುಟುಂಬದ ಎಲ್ಲಾ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ನಲ್ಲಿರಿಸಲಾಗಿರುತ್ತದೆ .
ಮೇ 20 ರಂದು ಇವರು ಕೋವಿಡ್ 19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ಐದು ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕರೊನಾ ಸೊಂಕು ತಗಲುವ ಸಾಧ್ಯತೆ ಇದೆ .
, ಅಂತಹ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

