ರಾಜ್ಯ

ಅಷ್ಟಮಠಗಳ ನಡುವೆ ಮತ್ತೇ ಜಟಾಪಟಿ

ಉಡುಪಿ : ಉಡುಪಿಯ ಅಷ್ಟಮಠಗಳ ನಡುವೆ ಮತ್ತೇ ಜಟಾಪಟಿ ಎರ್ಪಟ್ಟಿದೆ. ಶಿರೂರಿನ ಲಕ್ಷ್ಮೀವರ ಸ್ವಾಮೀಜಿ ಅದಮಾರು ಮಠದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಶಿರೂರ ಸ್ವಾಮೀಜಿ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಅದಮಾರು ಮಠಕ್ಕೆ ಪಟ್ಟದ ಮೂರ್ತಿಗಳನ್ನು ನೀಡಿದ್ದರು. ಆದರೆ ಇದೀಗ ಮೂರ್ತಿಗಳನ್ನು ಹಸ್ತಾಂತರ ಮಾಡದೆ ಅದಮಾರು ಮಠದ ಶ್ರೀಗಳು ಸತಾಯಿಸುತ್ತಿದ್ದಾರೆ. ನಂಬಿಕೆ ಮೇಲೆ ನೀಡಿದ್ದ ಪಟ್ಟದ ದೇವರು ವಾಪಾಸ್ ನೀಡದೆ ಅನ್ಯಾಯವೆಸಗಿದ್ದಾರೆ ಎಂದು ಕಿಡಿಕಾರಿರುವ ಲಕ್ಷ್ಮೀವರ ಸ್ವಾಮೀಜಿ ಇದು ದರೋಡೆಗೆ ಸಮ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಶಿರೂರ ಶ್ರೀಗಳು ಈ ಹಿಂದೆ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದರಿಂದ ಆಗ ಕೂಡ ವಿವಾದ ಬುಗಿಲೆದ್ದಿತ್ತು. ಅಲ್ಲದೆ, ಇದು ಅಷ್ಟಮಠಗಳ ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದು, ಶಿರೂರ ಶ್ರೀಗಳು ಶಿಷ್ಯ ಸ್ವೀಕಾರ ಮಾಡುವಂತೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Please follow and like us:

Leave a Reply

Your email address will not be published. Required fields are marked *