ಧಾರವಾಡ prajakiran.com : ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀ ಕಲ್ಮೇಶ್ವರ ಗುಡಿ ಓಣಿಯ ರೈತ ಕಲ್ಯಾಣಿ ನಾಗಪ್ಪ ನುಗ್ಗಾನಟ್ಟಿ ಸೋಮವಾರ ಬೆಳಗಿನ ಜಾವ ಮನೆಯ ಮಹಡಿ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಬ್ಯಾಂಕ್ ಸೇರಿದಂತೆ ಕೈಗಡ ಸಾಲ ಮಾಡಿಕೊಂಡಿದ್ದನೆಂದು ತಿಳಿದುಬಂದಿದ್ದು, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.