- 30 ಎಂಎಲ್ ಜೇನಿನಲ್ಲಿ 30 ಎಂಎಲ್ ಈರುಳ್ಳಿ ರಸ ಸೇರಿಸಿ ನಿತ್ಯ ಬೆಳಗ್ಗೆ ರಾತ್ರಿ ತೆಗೆದುಕೊಂಡರೆ ತೆಲೆ ನೋವು ಹೋಗುತ್ತದೆ.
- ಕರಿಯ ತುಂಬೆ ರಸ, ಮೆಣಸಿನ ಕಾಳು ಮತ್ತು ಬೆಳ್ಳುಳ್ಳಿ ಇವುಗಳನ್ನು ಸೇರಿಸಿ ಅರೆದು ಹಣೆಗೆ ಲೇಪ ಹಾಕಬೇಕು.
- ಗೋಡಂಬಿ ಎಲೆಯನ್ನು ಅರೆದು ಹಣೆಗೆ ಲೇಪ ಹಾಕಬೇಕು.
- ಸಾಸಿವೆಯನ್ನು ಗೋ ಮೂತ್ರದಲ್ಲಿ ಅರೆದು ಬಿಸಿ ಮಾಡಿ ಹಣೆ ಮತ್ತು ನೆತ್ತಿಗೆ ಲೇಪಿಸುವುದರಿಂದ ಶೀತದ ತಲೆ ನೋವು ಪರಿಹಾರ
- ಮೆಣಸಿನಕಾಯಿಯ ಸೋಪ್ಪನ್ನು ಕುಟ್ಟಿ ಬಟ್ಟೆಯಲ್ಲಿ ಕಟ್ಟಿ ಬಲಗಡೆ ತಲೆ ನೋವು ಇದ್ದರೆ ಎಡಗಡೆ ಮೂಗಿನಲ್ಲೂ ಎಡಗಡೆ ತಲೆನೋವು ಇದ್ದರೆ ಬಲಗಡೆ ಮೂಗಿನಲ್ಲೂ ಕೆಲವು ಹನಿಗಳನ್ನು ಬಿಟ್ಟರೆ ಎಲ್ಲ ತಲೆ ನೋವು ಪರಿಹಾರ.
- ನುಗ್ಗೆ ಸೊಪ್ಪಿನ ರಸದಲ್ಲಿ ಹಸುವಿನ ತುಪ್ಪ ಹಾಕಿ ಕಾಯಿಸಿದ ತುಪ್ಪವನ್ನು ಮೂಗಿನಲ್ಲಿ ಹಾಕಿದರೆ ಎಲ್ಲ ಬಗೆಯ ತಲೆ ಶೂಲೆ ಪರಿಹಾರ.
- ತುಂಬೆ ಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ ಸೇರಿಸಿ ಮೂಗಿನಲ್ಲಿ ಕೆಲವು ಹನಿ ಹಿಂಡಿದರೆ ಎಲ್ಲ ಬಗೆಯ ತಲೆ ಶೂಲೆ ಪರಿಹಾರ.
- ನುಗ್ಗೆ ಎಲೆಯನ್ನು ನೀರಿನಲ್ಲಿ ಅರೆದು 4 ರಿಂದ 6 ಹನಿಯನ್ನು ಮೂಗಿನಲ್ಲಿ ಬಿಡುವುದರಿಂದ ತಲೆ ನೋವು ಕಡಿಮೆಯಾಗುವುದು.
- 10 ಗ್ರಾಂ ಹಸುವಿನ ತುಪ್ಪದಲ್ಲಿ 50 ಗ್ರಾಂ ಬೆಲ್ಲ ಕಲಿಸಿ ನಿತ್ಯ ನಿತ್ಯ ಬೆಳಗ್ಗೆ ತಿನ್ನುವುದರಿಂದ ತಲೆಶೂಲೆ ಪರಿಹಾರ ಆಗುವುದು ಮೂರು ದಿನ.
- ತುಳಸಿ ರಸ ಹಾಗೂ ಯಾಲಕ್ಕಿಯನ್ನು ಅರೆದು ಹಣಗೆ ಲೇಪಿಸುವುದರಿಂದ ತಲೆ ಶೂಲೆ ಪರಿಹಾರ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು.