ಹುಬ್ಬಳ್ಳಿ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಕನ್ನಡ ಸಮ್ಮೇಳನ ಸಿದ್ದತೆ ವೇಳೆ ಮತ್ತೊಂದು ಯಡವಟ್ಟು ಮಾಡಿಕೊಂಡಿರುವುದು ಪ್ರಗತಿಪರ ಮಹಿಳೆಯರ ಆಕ್ರೋಶ ಕ್ಕೆ ಕಾರಣವಾಗಿದೆ
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದದಿಂದ ಈ ಅಪಸ್ವರ ಎದ್ದಿದ್ದು, ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಅವರಿಗೆ ಪೂರ್ಣಕುಂಭ ಸ್ವಾಗತ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ಒಕ್ಕೂಟದ ಮುಖ್ಯಸ್ಥೆ ಮತ್ತು ಕವಯತ್ರಿ ಸುನಂದಾ ಕಡಮೆ, ಚೇತನಾ ತೀರ್ಥಹಳ್ಳಿ, ಹನುಮಾಕ್ಷಿ ಗೋಗಿ ಸೇರಿದಂತೆ ನೂರಾರು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮ್ಮೇಳನಾಧ್ಯಕ್ಷರಿಗೆ ಸುಮಂಗಲೆಯರಿಂದ ಪೂರ್ಣ ಕುಂಭ ಸ್ವಾಗತ ಮಾಡಿಸ್ತಿರೋದಕ್ಕೆ ತೀವ್ರ ಸ್ವರೂಪದ ಬೇಸರ ವ್ಯಕ್ತಪಡಿಸಿ, ಫೇಸ ಬುಕ್, ವಾಟ್ಸ ಅಪ್ ನಲ್ಲೂ ತಮ್ಮ ಅಸಮಾಧಾನ ಹೊರ ಹಾಕಿದ್ದು, ಮಹಿಳೆಯರನ್ನ ಸುಮಂಗಲೆಯರು, ಅಮಂಗಲೆಯರು ಅಂತ ವಿಭಜಿಸಬೇಡಿ ಅಂತ ಆಗ್ರಹ ಪಡಿಸಿದ್ದಾರೆ.
ಸಾಹಿತ್ಯ ಸಮ್ಮೇಳನ ಸಾರ್ವಜನಿಕ ಕಾರ್ಯಕ್ರಮ.
ಇದರಲ್ಲಿ ಸಾಂಪ್ರದಾಯಿಕ ಆಚಾರ ವಿಚಾರ ಬರಬಾರದು.
ಪೂರ್ಣಕುಂಭ ಸ್ವಾಗತ ತಮ್ಮ ತಮ್ಮ ಮನೆ, ಮಠಗಳಲ್ಲಿ ಮಾಡಿಕೊಳ್ಳಲಿ.
ಸಾರ್ವಜನಿಕ ಸಮಾರಂಭ, ಸಮ್ಮೇಳನಕ್ಕೆ ಸಾಪ್ರದಾಯಿಕ ಆಚರಣೆ ಎಷ್ಟು ಸರಿ?
ಪೂರ್ಣಕುಂಭ ಸ್ವಾಗತ ಮಾಡಲೇ ಬಾರದು ಅಂತ ಬೇಡಿಕೆ ಇಟ್ಟಿರುವ
ಅವರು ಈ ಬಗ್ಗೆ ಕಸಾಪ ಅಧ್ಯಕ್ಷ ಮನು ಬಳಿಗಾರ,
ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಅವರನ್ನ ಫೇಸ್ಬುಕ್ ನಲ್ಲಿ ಪ್ರಶ್ನಿಸಿದ ಸುನಂದಾ ಕಡಮೆ.
ಸುಮಂಗಲಿಯರು ಪದವನ್ನು ನೀವು ಯಾವ ಅರ್ಥದಲ್ಲಿ ಬಳಸುತ್ತಿದ್ದೀರಿ?
ಸಮಾನತೆಯ ಸಮಾಜ ಕಟ್ಟಲು ಕೈ ಜೋಡಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಸುಮಂಗಲಿಯರು ಅಮಂಗಲಿಯರು ಎಂಬ ತಾರತಮ್ಯ ಎಣಿಸುವುದು ಖೇದದ ಸಂಗತಿಯಲ್ಲವೇ? ಎಂದು ತರಾಟೆ ತೆಗೆದುಕೊಂಡಿದ್ದಾರೆ.
ರಾಜ್ಯಾದ್ಯಕ್ಷರಾದ ಮನು ಬಳಿಗಾರ ಅವರಿಗೆ ಈ ಕೂಡಲೇ ತಿಳಿಸಿ ಹೇಳಿ, ಈ ಹುಚ್ಚಾಟವನ್ನು ನಿಲ್ಲಿಸುವಂತೆ ಸುನಂದಾ ಮನವಿಿ ಮಾಡಿದ್ದು,
ತಕ್ಷಣಕ್ಕೆ ಪೂರ್ಣ ಕುಂಭ ಮೇಳದ ಆದೇಶ ರದ್ದು ಮಾಡಿ ಹೊರಡಿಸದೇ ಇದ್ದರೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಅಗತ್ಯ ಹೋರಾಟದ ಎಚ್ಚರಿಕೆೆ ರವಾನಿಸಿದ್್ದದಾರೆ.