- ಗಂಟಲ ಸಮಸ್ಯೆಗೆ ಅಳಲೆಕಾಯಿ ದಿವ್ಯೌಷಧ.ಅಳಲೆಕಾಯಿ ಸಿಪ್ಪೆಗಳನ್ನು ನುಣ್ಣಗೆ ಅರೆದು ಅರ್ಧ ಚಮಚ ಮಿಶ್ರಣವನ್ನು ಉಪ್ಪು ಅಥವಾ ಜೇನಿನ ಜತೆ ಸೇವಿಸಬೇಕು.
- ಮದರಂಗಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಶೋಧಿಸಿ ತಣ್ಣಗಾದ ನಂತರ ಆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು.
- ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿದರೂ ಒಳ್ಳೆಯದು ಅಥವಾ ಬಾಯಿ ಮುಕ್ಕಳಿಸಿದರೂ ಒಳ್ಳೆಯದು ಗಂಟಲು ಗೊಗ್ಗರು ಕಡಿಮೆಯಾಗುತ್ತದೆ.
- ಒಣಗಿಸಿದ ಹುಣಸೆ ಎಲೆಗಳನ್ನು ಹುಣಸೆ ಮರದ ತೊಗಟೆಯೊಂದಿಗೆ ಕುಟ್ಟಬೇಕು. ಆ ಪುಡಿಯನ್ನು ನೀರಿಗೆ ಬೆರೆಸಿ ಶೋಧಿಸಿ ಆ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಸಮಸ್ಯೆ ತಗ್ಗುತ್ತದೆ.
- ಸ್ವಲ್ಪ ಓಮವನ್ನು ಕುಟ್ಟಿ ನೀರಿನಲ್ಲಿ ನೆನೆಸಿ ಅದಕ್ಕೆ ಉಪ್ಪು ಹಾಕಿ ಆ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಗಂಟಲ ಸಮಸ್ಯೆ ಬಹಳ ಬೇಗ ನಿವಾರಣೆಯಾಗುತ್ತದೆ.
- ಜೀರಿಗೆ ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಬೇಕು. ಅದು ಉಗುರು ಬೆಚ್ಚನೆಯ ಬಿಸಿ ಇದ್ದಾಗ ಕುಡಿದರೆ ಗಂಟಲ ಸಮಸ್ಯೆ ಹೋಗುತ್ತದೆ.
- ಒಂದೆರಡು ಬೆಳ್ಳುಳ್ಳಿ ಎಸಳುಗಳನ್ನು ಅಗಿದು ತಿಂದರೂ ಗಂಟಲ ಸಮಸ್ಯೆ ನಿವಾರಣೆಯಾಗುತ್ತದೆ.
- ಕಾಲು ಚಮಚ ಪಿಪ್ಪಲಿ ಪುಡಿ, ಒಂದು ಚಮಚ ಜೇನು ಬೆರೆಸಿ ತಿನ್ನಬೇಕು. ಅಥವಾ ಈ ಮಿಶ್ರಣದಲ್ಲಿ ಗೋಧಿ ಹಿಟ್ಟನ್ನು ಕಲೆಸಿ ರೊಟ್ಟಿಯಂತೆ ತಟ್ಟಿ ಕೆಂಡದ ಮೇಲೆ ಸುಟ್ಟು ತಿಂದರೂ ಗಂಟಲ ಸಮಸ್ಯೆ ನಿವಾರಣೆಯಾಗುತ್ತದೆ.
- ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಆ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಪ್ಲೋದಿಂದಾಗಿ ಉಂಟಾಗುವ ಗಂಟಲ ಸಮಸ್ಯೆಗಳು ನಿವಾರಣೆಯಾಗುತ್ತವೆ.
- ವೀಳ್ಯೆದೆಲೆಯನ್ನು ನುಣ್ಣಗೆ ಅರೆದು ಅದನ್ನು ಗಂಟಲಿನ ಮೇಲೆ ಲೇಪಿಸಿಕೊಳ್ಳಬೇಕು. ಕೆಮ್ಮು ಸಹ ಬರುತ್ತಿದ್ದರೆ ಅಡಿಕೆ ಹೋಳನ್ನು ಜೇಣಿನಲ್ಲಿ ಬೆರೆಸಿ ತಿನ್ನಬೇಕು,
ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು