- ಮೆಂತ್ಯೆ ದಿನ ನಿತ್ಯ ಬಳಕೆಯ ವಸ್ತುವಾಗಿದೆ. ಮೆಂತ್ಯೆದ ಎಲೆ ಮತ್ತು ಬೀಜಗಳು ಪಚನಕ್ರಿಯೆಗೆ ಅತ್ಯಂತ ಪರಿಣಾಮಕಾರಿ.
- ಮೆಂತ್ಯೆ ಸೇವನೆಯೂ ಹೊಟ್ಟೆಯುಬ್ಬರವನ್ನು ನಿವಾರಿಸಿ ಶರೀರಕ್ಕೆ ಆರಾಮದಾಯಕ ಅನುಭವ ನೀಡುತ್ತದೆ.
- ಮೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮುಂಜಾನೆ ಸೇವಿಸಿದರೆ ಮಲಬದ್ದತೆಯನ್ನು ನಿವಾರಿಸುತ್ತದೆ.
- ಮೆಂತ್ಯೆದ ಪುಡಿಯನ್ನು ಬೆಳಗ್ಗೆ ಒಂದು ಲೋಟ ನೀರಿನಲ್ಲಿ ಸೇವಿಸುವುದರಿಂದ ಮಧುಮೇಹ ರೋಗವನ್ನು ನಿಯಂತ್ರಿಸಿಕೊಳ್ಳಬಹುದು.
- ಶುಂಠಿಯು ಜೀರ್ಣಕ್ರಿಯೆಗೆ ಪೂರಕವಾಗಿರುವ ಕಿಣ್ವಗಳನ್ನು ಬಿಡುಗಡೆ ಮಾಡುವ ಮೂಲಕ ಜೀರ್ಣಾಂಗವ್ಯೂಹದ ರೋಗ ನಿರೋಧಕ ಶಕ್ತಿಯನ್ನು ವೃದ್ದಿಗೊಳಿಸುತ್ತದೆ.
- ದಾಲ್ಚಿನ್ನಿ ಎಲೆಗಳನ್ನು ಔಷಧ ರೂಪವಾಗಿ ಬಳಸುವುದು ಮಾತ್ರವಲ್ಲದೆ, ಮೈಗ್ರೇನ್ ಮಾನಸಿಕ ಒತ್ತಡ ಹಾಗೂ ಉದ್ವೇಗ ನಿವಾರಣೆಗೂ ಉಪಯೋಗಿಸಲಾಗುತ್ತದೆ.
- ದಾಲ್ಚಿನ್ನಿ ಜೀರ್ಣಕ್ರಿಯೆಗೆ ಅತ್ಯಂತ ಪರಿಣಾಮಕಾರಿಯಾಗಿದ್ದು, ದೈಹಿಕ ಚಟುವಟಿಕೆಗಳ ಸಮರ್ಪಕ ನಿವಾರಣೆಗೂ ಸಹಕಾರಿ.
- ಪುದೀನಾ ಚಟ್ನಿ ಸೇವಿಸುವದಿರುವವರೇ ವೀರಳ ಎಂದು ಹೇಳಬಹುದು. ಎದೆಯುರಿತ, ಅಜೀರ್ಣದ ಸಮಸ್ಯೆಗಳು, ಹೊಟ್ಟೆ ನೋವು, ಉದರವಾಯು ಮುಂತಾದ ತೊಂದರೆಗಳಿಗೆ ಪುದೀನ ಸೊಪ್ಪು, ಅತ್ಯಂತ ಪರಿಣಾಮಕಾರಿ.
- ಪರಂಗಿ ಹಣ್ಣಿನ ಸೇವನೆ, ಹೊಟ್ಟೆಯೊಳಗಿನ ಹುಳುಗಳನ್ನು ನಾಶಪಡಿಸುವುದು ಮಾತ್ರವಲ್ಲದೆ, ಹೊಟ್ಟೆಯುರಿ, ಮಲಬದ್ದತೆ ತೊಂದರೆಗಳನ್ನು ನಿವಾರಿಸುತ್ತದೆ.
- ಅಂಜೂರ ಸೇವನೆಯಿಂದ ಪಚನ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಸ್ನಾಯುಗಳನ್ನು ಬಲಗೊಳಿಸುವಲ್ಲಿ ಅಂಜೂರಪೂರಕವಾಗಿದೆ.
- ಸೊಂಪು ಒಂದು ಜೀರ್ಣಕಾರಕ ಮಾತ್ರವಲ್ಲದೆ ಅಡುಗೆಯ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
- ನಿಂಬೆ ಹಣ್ಣಿನ ಜ್ಯೂಸ್ ಹಾಗೂ ನೀರು ಮಜ್ಜಿಗೆ ಸೇವಿಸುವುದು ಉತ್ತಮ
ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು