ರಾಜ್ಯ

ಮಾನವ ಹಕ್ಕುಗಳ ಆಯೋಗದ ಮೊರೆ ಹೋದ ರಡ್ಡಿ ಆಪ್ತ !

ಬೆಂಗಳೂರು : ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮೂಲದ ರಾಜ್ ಮಹಲ್ ಜ್ಯುವೆಲರ್ಸ್ ಮಾಲೀಕ ಹಾಗೂ ಗಾಲಿ ಜನಾರ್ಧನರಡ್ಡಿ ಅವರ ಆಪ್ತ ರಮೇಶ್ ಅವರೊಂದಿಗೆ ಸಿಸಿಬಿ ಪೊಲೀಸರು ಅಮಾನುಷವಾಗಿ ನಡೆಸಿಕೊಂಡಿರುವುದನ್ನು ಪ್ರಶ್ನಿಸಿ, ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.

ಡಿಸಿಪಿ ಗಿರೀಶ ಹಾಗೂ ಎಸಿಪಿ ವೆಂಕಟೇಶ್ ಪ್ರಸಾದ್ ಸಾಕಷ್ಟು ತೊಂದರೆಕೊಟ್ಟಿದ್ದಾರೆ. ಅಮಾನುಷ ಹಲ್ಲೆ ಮಾಡಿದ್ದಾರೆ. ಇವರಿಬ್ಬರು ವಿಚಾರಣೆ ನೆಪದಲ್ಲಿ ಹಲ್ಲೆ ಮಾಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ರಮೇಶ ದೂರಿನಲ್ಲಿ ಆಪಾದಿಸಿದ್ದಾರೆ.

ಅಲ್ಲದೆ, ಬಟ್ಟೆ ಕಳಚಿ, ಕೂಡಿಸಿದ್ದಾರೆ. ಮನಬಂದಂತೆ ಥಳಿಸಿ, ಗಂಭೀರವಾದ ಗಾಯಗಳನ್ನು ಮಾಡಿದ್ದಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನೊಂದಿರುವುದಾಗಿ ತಾವು ದುಃಖ ತೋಡಿಕೊಂಡಿದ್ದಾರೆ.

ಅಲ್ಲದೆ, ತಮಗಾಗಿರುವ ಅನ್ಯಾಯಕ್ಕೆ ಮಾನವ ಹಕ್ಕುಗಳ ಆಯೋಗ ನ್ಯಾಯ ನೀಡಬೇಕು ಎಂದು ಅಳಲು ತೊಡಿಕೊಂಡಿದ್ದಾರೆ.

ಕರ್ನಾಟಕ ಜ್ಯುವೆಲರ್ಸ್ ಫೆಡರೇಶನ್ ಕೂಡ ಅವರಿಗೆ ಸಾಥ್ ನೀಡಿದ್ದು, ಸಿಸಿಬಿ ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸುತ್ತಿದೆ. ಸಮ್ಮೀಶ್ರ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಹೀಗಾಗಿ ಡಿಸಿಪಿ ಗಿರೀಶ ಹಾಗೂ ಎಸಿಪಿ ವೆಂಕಟೇಶ್ ಪ್ರಸಾದ್ ತನಿಖಾಧಿಕಾರಿ ಸ್ಥಾನದಿಂದ ಬದಲಿಸುವಂತೆ ಹೈಕೋರ್ಟ್ ಮೊರೆ ಹೋಗಿರುವುದಾಗಿ ವಕೀಲ ಹನುಮಂತರಾಯ ತಿಳಿಸಿದರು.

ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಗಾಲಿ ಜನಾರ್ಧನರಡ್ಡಿ ಅವರನ್ನು ಬಂಧಿಸಬೇಕೆ ಬೇಡವೇ ಎಂದು ಚರ್ಚಿಸಿರುವುದು ಶೋಭೆ ತರುವದಂತಲ್ಲ. ಇದು ತಲೆ ತಗ್ಗಿಸುವಂತ ಸಂಗತಿಯಾಗಿದೆ. ಇದು ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕಂಡು ಬರುತ್ತದೆ ಎಂದು ದೂರಿದ್ದಾರೆ.

Please follow and like us:

Leave a Reply

Your email address will not be published. Required fields are marked *