ರಾಜ್ಯ

ಜನಾರ್ಧನರಡ್ಡಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್ !

ಬೆಂಗಳೂರು : ಬೆಂಗಳೂರು ಸಿಸಿಬಿ ಪೊಲೀಸರ ಬಂಧನ ಭೀತಿಯಿಂದ ತಲೆ ಮೆರೆಸಿಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಜಾಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.

ನ್ಯಾಯಾಲಯ ರಡ್ಡಿ ಪರ ವಕೀಲರಿಗೆ ಸಿಸಿಬಿ ವಿಚಾರಣೆಗೆ ಮುನ್ನವೇ ಮಧ್ಯಂತರ ಜಾಮೀನು ಪಡೆಯುವ ಅಗತ್ಯವಿದೆ ಎಂದು ಪ್ರಶ್ನಿಸಿತು. ಇದಕ್ಕೆ ರಡ್ಡಿ ಪರ ವಕೀಲ ಹನುಮಂತರಾಯ, ಸಿಸಿಬಿ ಬಂಧಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು. ಅಲ್ಲದೆ, ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದರೆ ಭಾನುವಾರವೇ ಸಿಸಿಬಿ ಪೊಲೀಸ್ ಎದುರು ಗಾಲಿ ಜನಾರ್ಧನರಡ್ಡಿ ಹಾಜರಾಗಲಿದ್ದಾರೆ ಎಂದು ಹೇಳಿದರು.

ಬಂಧನಕ್ಕೆ ಮೇಲ್ನೋಟಕ್ಕೆ ಸೂಕ್ತ ಕಾರಣ ಕಾಣುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟ ಹಿನ್ನಲೆಯಲ್ಲಿ ರಡ್ಡಿ ಪರ ವಕೀಲರು ಮಧ್ಯಂತರ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡರು.ರಡ್ಡಿಗೆ ಜಾಮೀನು ಸಿಗುತ್ತಾ ಇಲ್ಲವೇ ಎಂಬುದು ಸೋಮವಾರ ಗೊತ್ತಾಗಲಿದೆ.

ಇದೇ ವೇಳೆ ನ್ಯಾಯಾಲಯದಲ್ಲಿ ವಕೀಲರೊಬ್ಬರು ತಾವು ಆಂಬಿಡೆಂಟ್ ಗ್ರಾಹಕರಾಗಿದ್ದು, ಸರಕಾರಿ ಅಭಿಯೋಜಕರಿಗೆ ಸಹಾಯಕರಾಗಿ ವಕಾಲತ್ತು ವಹಿಸಲು ಅವಕಾಶ ಕಲ್ಪಿಸಬೇಕು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸಿಸಿಬಿ ಪೊಲೀಸರು ಕೂಡ ನವೆಂಬರ್ 11ರಂದು ಜನಾರ್ಧನರಡ್ಡಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

Please follow and like us:

Leave a Reply

Your email address will not be published. Required fields are marked *