ಚೇಳು ಕಡಿದಾಗ ಜೀರಿಗೆ ಅರೆದು ಲೇಪನ ಮಾಡುವುದರಿಂದ ಚೇಳಿನ ವಿಷ ದೇಹವನ್ನು ವ್ಯಾಪಿಸುವುದಿಲ್ಲ.
ನೋವು ನಿವಾರಕವಾಗಿರುವ ಜೀರಿಗೆ ಲೇಪವು ಬಾವನ್ನು ಕೂಡ ಇಳಿಸುತ್ತದೆ.
ಮೂತ್ರ ಮಾಡುವಾಗ ಹೆಚ್ಚು ನೋವು ಉಂಟಾಗುವುದು ಹಾಗೂ ಮೂತ್ರ ಮಾರ್ಗದಲ್ಲಿ ತಡೆ ಉಂಟಾಗುವುದನ್ನು ನಿವಾರಣೆ ಮಾಡಿಕೊಳ್ಳಲು ಜೀರಿಗೆ ಉತ್ತಮ ಔಷಧವಾಗಿದೆ.
ಜೀರಿಗೆ ಗರ್ಭಾಶಯವನ್ನು ಕೂಡ ಶುಚಿಗೊಳಿಸುತ್ತದೆ. ಶ್ವೇತ ಪದರವನ್ನು ನಿವಾರಿಸುತ್ತದೆ.
ತುಂಬಾ ದಿನಗಳಿಂದ ವಿಷಮ ಜ್ವರ ಭಾದಿಸುತ್ತಿದ್ದರೆ ಅಥವಾ ವಾತ ಪ್ರಧಾನ ಜ್ವರಗಳಿದ್ದಾಗ ಬೆಲ್ಲದೊಂದಿಗೆ ಜೀರಿಗೆಯ ಸೇವನೆ ಬಹಳ ಪರಿಣಾಮಕಾರಿಯಾಗಿದೆ.
ತುಪ್ಪ ಮತ್ತು ಸೈಂದವ ಲವಣಗಳೊಂದಿಗೆ ಜೀರಿಗೆಯ ಮಿಶ್ರಣ ಮಾಡಿ ಹಚ್ಚುವುದರಿಂದ ಕೆಲವು ವಿಷ ಕ್ರೀಮಿಗಳ ಕಚ್ಚುವಿಕೆಯ ವಿಷ ನಾಶವಾಗುತ್ತದೆ.
ಜೀರಿಗೆಯನ್ನು ಹುರಿದು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುಡಿಯುವುದರಿಂದ ಕೆಮ್ಮು ಕಫಾ ಕಡಿಮೆಯಾಗುತ್ತದೆ.
ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ, ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ.
ಜೀರಿಗೆ ನೀರು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ರಕ್ತದಲ್ಲಿ ಇರುವ ಸಕ್ಕರೆ ಅಂಶ ಕಡಿಮೆ ಆಗುತ್ತದೆ.
ಜೀರ್ಣ ಕ್ರಿಯೆಗೆ ಜೀರಿಗೆ ಸಹಕರಿಸುತ್ತದೆ. ಪ್ರತಿನಿತ್ಯ ಒಂದು ಚಮಚ ಜೀರಿಗೆ ತಿನ್ನುವುದರಿಂದ ಹೊಟ್ಟೆಗೆ ಸಂಭವಿಸಿದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುವವರಿಗೆ ಜೀರಿಗೆ ರಾಮಬಾಣವಾಗಿದೆ. ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೇರಿಸಿ ಕುಡಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಜೀರಿಗೆಯನ್ನು ಬೆಲ್ಲದೊಡನೆ ಸೇವಿಸಿದರೆ ಬಾಣಂತಿಯರಿಗೆ ಮೊಲೆ ಹಾಲು ವೃದ್ಧಿಯಾಗುತ್ತದೆ.
ಒಂದು ಕಪ್ ಮೊಸರಿಗೆ 5 ಗ್ರಾಂ ಜೀರಿಗೆ ಪುಡಿ ಮಾಡಿ ದಿನಾಲೂ ಸೇವಿಸುವುದರಿಂದ ಮೈ ಕೊಬ್ಬು ಹಾಗೂ ಅಧಿಕ ಮೈ ಬೊಜ್ಜನ್ನು ಕೂಡ ಕರಗಿಸುತ್ತದೆ.
ಜೀರಿಗೆಯಲ್ಲಿ ವಿಟಾಮಿನ್ ಇ ಅಂಶ ಹೇರಳವಾಗಿದೆ. ಇದು ರಕ್ತದ ಕೊರತೆ, ಎಣ್ಣೆ ಅಂಶ ಮೊದಲಾದ ಸಮಸ್ಯೆಗಳಿಂದ ಮೂಡುವ ಮೊಡವೆಗಳನ್ನು ನಿವಾರಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಬಸಳೆ ಸೊಪ್ಪಿನ ನಿಯಮಿತ ಸೇವನೆಯಿಂದ ಸಾಕಷ್ಟು ಹಸಿವು ಹೆಚ್ಚುತ್ತದೆ. ಅಲ್ಲದೆ, ಮಲಬದ್ದತೆಯಿಂದ ಬಳಲುವವರು ಬಸಳೆ ಸೊಪ್ಪು ಪಲ್ಯ ಸೇವನೆ ಮಾಡಿದರೆ ಮಲಬದ್ಧತೆ ಗುಣಮುಖವಾಗುತ್ತದೆ. ನಿಮ್ಮ ದೇಹದ ತೂಕ ಹೆಚ್ಚಿಸಬೇಕೆ ಹಾಗಿದ್ದರೆ ಬಸಳೆ ಈ ಸೊಪ್ಪನ್ನು ಸೇವಿಸಿರಿ. ಬಸಳೆ ಸೊಪ್ಪು ಜ್ವರ ನಿವಾರಕ ಶಕ್ತಿ ಹೊಂದಿದ್ದು, ಮನುಷ್ಯನ ಆರೋಗ್ಯದ ಬಲವರ್ಧಕವಾಗಿಯೂ ಕೆಲಸ ಮಾಡುತ್ತದೆ. ಜ್ವರ ಬಂದಿದ್ದರೆ ಈ ಸೊಪ್ಪಿನ ರಸ ಸೇವನೆ ಮಾಡಬೇಕು. ತಾನಾಗಿಯೇ ಜ್ವರ ಇಳಿಮುಖವಾಗುತ್ತದೆ. ಮೇಲಿಂದ ಮೇಲೆ ತಲೆನೋವು ಬರುತ್ತಿದ್ದರೆ, ಬಸಳೆಯ ಲೋಳಯಂತಹ ರಸವನ್ನು ಹಣೆಯ […]
ದಿನನಿತ್ಯ ನಿಯಮಿತವಾಗಿ ಕ್ಯಾರೇಟ್ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಅದರಲ್ಲೂ ವಿಶೇಷವಾಗಿ ಇದು ಸಂತಾನೋತ್ಪತ್ತಿಗೆ ಸಾಕಷ್ಟು ಸಹಕಾರಿಯಾಗಿದೆ. ಅಲ್ಲದೆ, ಅದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. ಕ್ಯಾರೇಟ್ ನಲ್ಲಿರುವ ಬೀಟಾ ಕರೋಟಿನ್ ಅಂಶ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುತ್ತದೆ. ಹಲ್ಲಿನ ಆರೋಗ್ಯಕ್ಕೆ ಕೂಡ ಸಾಕಷ್ಟು ಸಹಾಯ ಮಾಡುತ್ತದೆ. ಕ್ಯಾರೇಟ್ ತಿನ್ನುವುದರಿಂದ ಹಲ್ಲುಗಳು ಬಲವಾಗುವುದು. ಇದು ಹಲ್ಲುಗಳು ಹುಳಕಾಗದಂತೆ ರಕ್ಷಣೆ ನೀಡುತ್ತದೆ. ಹೃದಯದ ಆರೋಗ್ಯಕ್ಕೂ ಇದು ಒಳ್ಳೇಯದು. ಇದು ಕೊಲೆಸ್ಟ್ರಾಲ್ ವಿರುದ್ದ ಹೋರಾಡಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಲಿವರ್ […]
ಚಳಿಗಾಲದಲ್ಲಿ ತುಟಿ ಒಡೆಯುವುದು ಸರ್ವೆ ಸಾಮಾನ್ಯ. ನಿಮ್ಮ ತುಟಿಯನ್ನು ಕೋಮಲವಾಗಿಸಲು ಈ ಟಿಪ್ಸನ್ನು ಬಳಸಿರಿ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ತುಟಿ ಒಣಗುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ. ಬಾದಮ್ ಎಣ್ಣೆ ಒಣ ತುಟಿಗೆ ಹಾಗೂ ಒಡೆದ ತುಟಿಗೆ ಹಚ್ಚುವುದರಿಂದ ಕೋಮಲವಾಗುತ್ತದೆ. ಪ್ರತಿದಿನ ಒಂದೆರಡು ಹನಿ ಬಾದಮ್ ಎಣ್ಣೆಯನ್ನು ತುಟಿಗೆ ಹಚ್ಚುವುದರಿಂದ ಕೂಡ ತುಟಿ ಕೋಮಲವಾಗುತ್ತದೆ. ಬಾದಮ್ ಎಣ್ಣೆಗೂ ವಿಶೇಷ ಸ್ಥಾನವಿದೆ. ಈ ಎಣ್ಣೆಯನ್ನು ಚರ್ಮ ಬೇಗನೆ ಹೀರಿಕೊಳ್ಳುತ್ತದೆ. ಹೀಗಾಗಿ ನಿಮ್ಮ ತುಟಿಗಳು ಕೋಮಲವಾಗುತ್ತವೆ. ಮಾಹಿತಿ : ಶಶಿಕಾಂತ […]