ಬೆಂಗಳೂರು prajakiran.com : ರಾಜ್ಯದಲ್ಲೆಡೆ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶನಿವಾರ ಒಂದೇ ದಿನ ಮತ್ತೇ 7 ಪ್ರಕರಣ ಬೆಳಕಿಗೆ ಬಂದಿವೆ.
ಮೈಸೂರಿನ ನಂಜನಗೂಡು ಜುಬಲಿಯೆಂಟ್ ಕಾರ್ಖಾನೆ ಕಾರ್ಮಿಕನಾಗಿದ್ದ ಪೆಸೇಂಟ್ ನಂ 88ನಿಂದ ಐವರಿಗೆ ಕರೋನಾ ಸೋಂಕು ಹರಡಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಅದೇ ರೀತಿ ಬೀದರ ಮತ್ತು ಬೆಂಗಳೂರುನಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೀದರನ 50 ವರ್ಷದ ಮಹಿಳೆ ಹಾಗೂ ಬೆಂಗಳೂರಿನ 32 ವರ್ಷದ ಪುರುಷ ಸೇರಿ ಮೈಸೂರಿನ ಐವರಿಗೆ ಕರೋನಾ ಸೋಂಕು ದೃಢಪಟ್ಟಿದೆ.
ಬೀದರನ ಓಲ್ಡ್ ಸಿಟಿಯ 50 ವರ್ಷದ ಮಹಿಳೆ ರೋಗಿ ನಂಬರ್ 122ರ ಜೊತೆಗೆ ಸಂಪರ್ಕ ಹೊಂದಿದ್ದರಿಂದಅವರಿಗೆ ಹರಡಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಯಾಗಿದೆ.
ಅಚ್ಚರಿಯ ಸಂಗತಿಯೆಂದರೆ ಮೈಸೂರಿನ ನಂಜನಗೂಡಿನಲ್ಲಿರುವ ಜುಬಲಿಯೆಂಟ್ ಕಂಪನಿಯ ಕಾರ್ಮಿಕ ನೊಬ್ಬನಿಂದಲೇ ಈವರೆಗೆ 36 ಜನರಿಗೆ ಕರೋನಾ ಸೋಂಕು ಹರಡಿದೆ.
ಈಗಾಗಲೇ ಈ ಸಂಬಂಧ ಕರೋನಾದಿಂದ ಗುಣಮುಖರಾಗಿದ್ದು, ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಆ ಮೂಲಕ ಮೈಸೂರಿನ ಸೊಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಅದೇ ರೀತಿ ಬೀದರ್ ಜಿಲ್ಲೆ 11ಕ್ಕೆ ಏರಿಕೆಯಾಗಿದೆ ಕಲಬುರಗಿ 10 ಸೋಂಕಿತರನ್ನು ಹೊಂದಿದೆ.
ಕಲಬರುಗಿಯಲ್ಲಿ ಮೊದಲ ಸೋಂಕಿತ ಸಾವನ್ನಪ್ಪಿದ್ದ ನಂತರ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಇದೀಗ ಕಲಬರುಗಿಯನ್ನು ಬೀದರ ಜಿಲ್ಲೆ ಮೀರಿಸಿದೆ.
ಬೀದರ್ ನಿಂದ ನಿಜಾಮೋದ್ದಿನ್ ಮರ್ಕಜ್ ನ ಬಾಂಗ್ಲೇವಾಲಿ ಮಸಿದಿ ಧಾರ್ಮಿಕ ಕಾರ್ಯಕ್ರಮದಲ್ಲಿ 27 ಜನರು ಹೋಗಿ ಬಂದಿದ್ದರು.
ಅದರಲ್ಲಿ 10 ಜನರಿಗೆ ಕರೋನಾ ಸೋಂಕು ಬಂದಿತ್ತು. ಇನ್ನೂ 101 ಜನರ ವರದಿ ತಪಾಸಣೆಗೆ ಹೋಗಿದ್ದು, ಜನತೆ ಆತಂಕದಿಂದಲೇ ವರದಿಗಾಗಿ ಎದುರು ನೋಡುತ್ತಿದ್ದಾರೆ.