ಹುಬ್ಬಳ್ಳಿ prajakiran.com : ಕರೋನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ವೆಕಾರ್ಯ ಮಾಡುತಿದ್ದ ಆಶಾ ಕಾರ್ಯಕರ್ತೆಯರಿಗೆ ಅಡ್ಡಿ ಪಡಿಸಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿ ನಡೆದಿದೆ.
ಶುಕ್ರವಾರ ಸಂಜೆ ಹುಬ್ಬಳ್ಳಿಯಲ್ಲಿ ಸಮೀಕ್ಷೆಗೆ ಬಂದಿದ್ದ ಆಶಾ ಕಾರ್ಯಕರ್ತೆಯರ ಕೈಯಲ್ಲಿ ಇದ್ದ ಕಡತಗಳನ್ನು ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.
ಹುಬ್ಬಳ್ಳಿಯ ಗೌಳಿ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಧಾರವಾಡ ಜಿಲ್ಲಾಡಳಿತದ ಆದೇಶದ ಹಿನ್ನಲೆಯಲ್ಲಿ ಸರ್ವೇ ಮಾಡಲು ಆಗಮಿಸಿದ ಆಶಾ ಕಾರ್ಯಕರ್ತೆಯರಿಗೆ ಗೌಳಿ ಗಲ್ಲಿಯ ಕೆಲವು ಪುಡಾರಿಗಳು ಈ ಅಡ್ಡಿ ಮಾಡಿದ್ದಾರೆ.
ನಮ್ಮ ಬಳಿ ಇದ್ದ ದಾಖಲೆಗಳನ್ನು ಕಸಿದುಕೊಂಡು ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯರಾದ ನಾಗವೇಣಿ ಪಾನಗಲ್, ಲತಾ ಶ್ರೀರಾಮ ದೂರಿದ್ದಾರೆ.
ನಾವು ಸರ್ವೆ ಮಾಡುತಿದ್ದ ವೇಳೆ ಕಡತಗಳನ್ನು ಕಸಿದುಕೊಂಡು ನಮ್ಮ ಜಮಾತದಲ್ಲಿ ಯಾವುದೇ ಮಾಹಿತಿಯಿಲ್ಲ ಎಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಹರ ಪೊಲೀಸ ಠಾಣೆಯ ಸಿಬ್ಬಂದಿಗಳು ಧಾವಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಪೊಲೀಸ ಅಧಿಕಾರಿಗಳು ವಶಕ್ಕೆ ಪಡೆದು ಈ ಕುರಿತು ವಿಚಾರಣೆ ನಡೆಸಿದ್ದಾರೆ.