ರಾಜ್ಯ

ಕರವೇ ಜಿಲ್ಲಾಧ್ಯಕ್ಷ ಕುಮಾರ ಪಾಟೀಲ‌ ಉಚ್ಛಾಟನೆ

ಧಾರವಾಡ : ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ವಸೂಲಿಗೆ ಇಳಿದಿದ್ದ ಕರವೇ ಜಿಲ್ಲಾಧ್ಯಕ್ಷ ಕುಮಾರ ಪಾಟೀಲ‌ ನನ್ನ ಸಂಘಟನೆಯಿಂದ ಉಚ್ಛಾಟನೆ ಮಾಡಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆದೇಶ ಹೊರಡಿಸಿದ್ದಾರೆ.

ಈತ ಕಳೆದ‌ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಸರಳ ವಾಸ್ತು ಕಚೇರಿಗೆ ನುಗ್ಗಿ, ಹಣದ ಬೇಡಿಕೆಯಿಟ್ಟಿದ್ದ ಕನ್ನಡ ಪರ ಸಂಘಟನೆಗಳ ಗುಂಪಿನಲ್ಲಿದ್ದ ಕಾರಣ ಆತನನ್ನು ಪೊಲೀಸರು ಬಂಧಿಸಿ, ಹುಬ್ಬಳ್ಳಿಯ ಉಪಕೇಂದ್ರಕಾರಾಗೃಹಕ್ಕೆ ತಳ್ಳಿದ್ದರು.

ಈ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣ ವೇದಿಕೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡ ಹಿನ್ನಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಚುಕ್ಕೆ ತಂದ ಕಾರಣಕ್ಕೆ ಕುಮಾರ ಪಾಟೀಲನನ್ನು ಕರವೇ ಯಿಂದ ಉಚ್ಛಾಟಿಸಲಾಗಿದೆ.

ಕರವೇ ಹೆಸರಿನಲ್ಲಿ ನಂತರದ ದಿನಗಳಲ್ಲಿ ಹಣ ವಸೂಲಿಗೆ ಮುಂದಾದರೆ ದೂರು‌ ನೀಡಲು ಸಾರ್ವಜನಿಕರಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *