ಬೆಂಗಳೂರು : ಕಾಂಗ್ರೆಸ್ ಪಕ್ಷದ ಮಹಾಘಟ್ ಬಂಧನ ಅನ್ನು ಕಳ್ಳರ ಸಂಘ ಎಂದು ಜರಿದಿರುವ ಪ್ರಧಾನಿ ನರೇಂದ್ರ ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಕಾಂಗ್ರೆಸ್ ಲೋಕಸಭಾ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜರಿದಿದ್ದಾರೆ.
ಅವರು ಶನಿವಾರ ಸಂಜೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ರೀತಿ ತಿರುಗೇಟು ನೀಡಿದರು.
ಪ್ರಧಾನಿಯಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅವರಿಗೆ ತಮ್ಮ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅಂತಾನೇ ಅವರು ಮೈತ್ರಿ ಮಾಡಿಕೊಂಡು ಎನ್ ಡಿ ಎ ಆಗಿದೆ. ಅದೇ ರೀತಿ ನಾವು ಜ್ಯಾತ್ಯಾತೀತ ಶಕ್ತಿಗಳ ಒಂದಾಗಿ ಕೋಮುವಾದದ ವಿರುದ್ದ ಹೋರಾಟ ನಡೆಸುತ್ತಿದ್ದೇವೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಗೆ ತಾಕತ್ ಇದ್ದರೆ ರಫೇಲ್ ಡೀಲ್ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದರು. ನಾವು ಹೇಳುತ್ತಿದ್ದೇವೆ ಅನಿಲ್ ಅಂಬಾನಿ ಕಂಪನಿ ಮಾಲೀಕತ್ವದ ರಿಯಯನ್ಸ್ ಕಂಪನಿಗೆ ಮೂವತ್ತು ಸಾವಿರ ಕೋಟಿ ರೂಪಾಯಿಯ ಹಗರಣದ ಬಗ್ಗೆ ಬಾಯಿ ಬಿಡಲಿ ಎಂದು ಗುಡುಗಿದ್ದಾರೆ.
ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಎಂ ಕ್ಲರ್ಕ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ್ದು, ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರ ಹುದ್ದೆಗೆ ಶೋಭೆ ಕೊಡುವುದಿಲ್ಲ.
ಅವರು ಈ ರೀತಿ ಆಧಾರ ರಹಿತ ಆರೋಪ ಮಾಡುವುದನ್ನು ಬಿಡಬೇಕು. ನಾವು ಅಂತಹ ಕೀಳುಮಟ್ಟದ ರಾಜಕಾರಣ ಮಾಡಲು ಆಗಲ್ಲ. ಅವರಿಗೆ ಸುಳ್ಳು ಹೇಳುವುದೇ ದೊಡ್ಡ ಕಾಯಕವಾಗಿದೆ ಎಂದು ಕಿಡಿಕಾರಿದರು.
Modiji heluvadralli tappilla