ಭೂಮಿಯಲ್ಲಿ ಒಟ್ಟು 12 ವಿಧಗಳಿವೆ. ಶೈವ, ಬ್ರಾಹ್ಮಣ,ವೈಷ್ಣವ, ಐಂದ್ರ, ಜಾಕ್ಷ, ಭೌತಿಕ, ಅಸುರ, ಪೈಶಾಚ, ರಾಕ್ಷಸ, ವಾಯುವ್ಯ,ವಾರುಣ ಹಾಗೂ ಆಗ್ನೇಯ
- ಶೈವ ಭೂಮಿಯ ಲಕ್ಷಣ : ಅಶ್ವಥ, ಮತ್ತಿ,ನೆಲತಾವರೆ, ತುಳಸಿ, ಗರಿಕೆ, ವಿಷ್ಣು ಕಾಂತಿ, ಬೆಟ್ಟದ ಸುಗಂಧ ಬೆಳೆದು ಇಣಬೆ ಗಿಳಿ, ಕೋಗಿಲೆ ಮುಂತಾದವು ವಾಸವಾಗಿದ್ದರೆ ಅದು ಶೈವ ಭೂಮಿ.
- ವೈಷ್ಣವ ಭೂಮಿ : ತುಂಬೆ, ಹುಣಸೆ, ಹೊಂಗೆ, ಬಿದಿರು, ಹತ್ತಿ, ಎಕ್ಕೆ, ದಾಸವಾಳ,ಮುಳ್ಳುಗಳಿದ್ದ ಮರಗಳಿಂದ ಕೂಡಿದ್ದು ವೈಷ್ಣವ ಭೂಮಿ.
- ಬ್ರಾಹ್ಮಣ ಭೂಮಿ : ಬಿಲ್ವ, ಮುತ್ತುಗ, ದರ್ಭೆ, ಸುವಾಸನೆಯುಳ್ಳ ಹೂವು, ದ್ರವ್ಯಗಳು ಇರುವ ಸ್ಥಳ ಬ್ರಾಹ್ಮಣ ಭೂಮಿ.
- ಇಂದ್ರ ಭೂಮಿ : ಬಾಳೆ, ಹಲಸು, ಮಾವು, ಬಕುಳ, ನೆಲ್ಲಿ ಇವುಗಳಿಂದ ಕೂಡಿ ವಾಸನೆ ಉಳ್ಳದಿದ್ದರೆ ಇಂದ್ರಭೂಮಿ ರಾಜಭೋಗವಾದದ್ದು ಐಶ್ವರ್ಯ ಪ್ರದವಾದದು.
- ಜಾಕ್ಷ ಭೂಮಿ : ಅಂಕೋಲೆ ಗಿಡಗಳು, ಬೆಕ್ಕು ಮುಂಗಲಿ, ಮೊಲ, ಹುಲಿ, ತೋಳ ಮುಂತಾದವುಗಳಿಂದ ಕೂಡಿ ಇದ್ದರೆ ಜಾಕ್ಷಭೂಮಿಯಾಗುವುದು. ಇದು ಸಂತಾನ ಸಂಪದ್ಭರಿತವಾದದು.
- ಭೌತಿಕಭೂಮಿ : ಗರಿಕೆ, ಅಂಕೋಲೆ, ಮುತ್ತಲ, ಮಲ್ಲಿಗೆ, ಹಿಪ್ಪೆ ಮುಂತಾದ ಮರಗಳಿಂದ ಕೂಡಿ ಬೂದಿ ವಾಸನೆಯಿಂದ ಕೂಡಿದ್ದರೆ ಭೌತಕಭೂಮಿ ಇಲ್ಲಿ ಮನೆ ಕಟ್ಟಿದವನಿಗೆ ಸುಗ್ರಾಸ ಭೋಜನಕ್ಕೆ ಕೊರತೆ ಇಲ್ಲ.
- ಅಸುರ ಭೂಮಿ : ಗೇರುಮರ, ಕ್ರೂರ ಜಂತು, ಬೇಡರು ಕರಿಮತ್ತಿ ಮರಗಳು, ರಣಹದ್ದು ಇವುಗಳಿಂದ ಕೂಡಿ ದೂರ್ವಾಸನೆಯಿಂದ ಕೂಡಿದ್ದರೆ ಅಸುರ ಭೂಮಿ. ಇದು ಕಲಹ, ಮನಸ್ತಾಪಕ್ಕೆ ತಳಹದಿಯಾದ ಜಾಗ.
- ಪೈಶಾಚ ಭೂಮಿ : ಬೂರಗ, ತಾರೆ, ಬಹುಳ, ಕತ್ತೆ, ಒಂಟಿ, ನರಿ, ಹಂದಿ, ಚಂಡಾಲ ಬೇಡರಿಂದ ಕೂಡಿದ ಭೂಮಿ ಪೈಶಾಚ ಭೂಮಿನಾಶಕ.
- ರಾಕ್ಷಸ ಭೂಮಿ : ಚಾಂಡಾಲ, ಕಳ್ಳರಿಂದ ಕೂಡಿ, ಮೆಣಸು, ಬೆಲ್ಲ, ಇವುಗಳ ವಾಸನೆ ಇದ್ದರೆ ರಾಕ್ಷಸ ಭೂಮಿ. ಇದು ಅಪಾಯಕಾರಿ.
- ಶೈವ, ವೈಷ್ಣವ, ಬ್ರಾಹ್ಮಣ ಭೂಮಿ ಒಳ್ಳೆಯದು. ವೈಷ್ಣವ, ಬ್ರಾಹ್ಮಣ ಹಾಗೂ ಶೈವ ಭೂಮಿಗಳು ಕ್ಷತ್ರಿಯರಿಗೆ ಶುಭ. ಜಾಕ್ಷಭೂಮಿ ವೈಶ್ಯರಿಗೆ ಶುಭ, ಭೌತ ಶೂದ್ರರಿಗೆ ಶುಭ, ಪೈಶಾಚಿಕ, ಅಸುರ, ರಾಕ್ಷಸ ಭೂಮಿಗಳು ಚಾಂಡಾಲರಿಗೆ ತಕ್ಕವೆಂದು ತಿಳಿಯಬೇಕು. ಇದು ನಮ್ಮ ಪೂರ್ವಜರ ವಿಚಾರ.
(ಪರಿಸರ ಕಾಪಾಡಬೇಕು. ಪ್ರಾಣಿ, ಮೃಗ ಎಲ್ಲಾ ಇರಬೇಕು ಅಲ್ಲವೇ ನಮ್ಮ ಪೂರ್ವಜರ ವಿಚಾರಗಳು ಆಧುನಿಕ ಯುಗದಲ್ಲಿ ನಡೆಯುವುದೇ)
ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು