ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಮತ್ತಿಬ್ಬರು ಪೊಲೀಸ್, ಹಾಗೂ ಜಿಲ್ಲಾ ಪಂಚಾಯತ್ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೂ ಕರೋನಾ ಕಂಟಕ ಎದುರಾಗಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಆಗಿದ್ದ ಮಹಿಳಾ ಸಿಬ್ಬಂದಿಗೂ ಮಂಗಳವಾರ ಕರೋನಾ ವೈರಸ್ ಆವರಿಸಿರುವುದು ಇತರ ಸಿಬ್ಬಂದಿಗೂ ಕಳವಳ ಮೂಡಿಸಿದೆ.
ಅದೇ ರೀತಿ ಧಾರವಾಡದ ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ ಸಿಡಿಪಿಒ ಒಬ್ಬರಿಗೆ ಗುರುವಾರ ಸೋಂಕು ಹರಡಿರುವುದು ಇಡೀ ಇಲಾಖೆಯ ಸಿಬ್ಬಂದಿಯನ್ನೇ ಬೆಚ್ಚಿಬೀಳಿಸಿದೆ.
ಅದರಲ್ಲೂ ಕರೋನಾ ಸೇನಾನಿಗಳಾದ ಮತ್ತಿಬ್ಬರು ಪೊಲೀಸರಿಗೆ ಕರೊನಾ ವಕ್ಕರಿಸಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.
ಇಬ್ಬರು ಮಹಿಳಾ ಕಾನ್ಸೇಬಲ್‌ಗೆ ಕರೊನಾ ಹರಡಿದೆ ಎನ್ನಲಾಗುತ್ತಿದೆ. ಧಾರವಾಡದ ಶಹರ ಪೊಲೀಸ್ ಠಾಣೆ ಹಾಗೂ ಧಾರವಾಡದ ಸಂಚಾರ ಠಾಣೆ ಕಾನ್ಸ್‌ಟೇಬಲ್ಸ್ ತಲಾ ಒಬ್ಬರಿಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಕರೋನಾ ರಾಂಡಮ್ ಟೆಸ್ಟ್ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಈಗಾಗಲೇ ಧಾರವಾಡ ಜಿಲ್ಲೆಯ ಹತ್ತು ಹಲವು ಪೊಲೀಸ್, ಅಧಿಕಾರಿಗಳು, ಸಿಬ್ಬಂದಿಯನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೋನಾ ವೈರಸ್ ಸೋಂಕು ಇದೀಗ ಎಲ್ಲಡೆ ಹರಡುತ್ತಿರುವುದು ಸರಕಾರಿ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟಿದೆ.
ಭಯದಲ್ಲಿಯೇ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿಗೆ ಅವರ ಸಂಪರ್ಕ ಮಾಹಿತಿಯನ್ನು (ಟ್ರಾವೆಲ್ ಹಿಸ್ಟರಿಯನ್ನು ನೀಡುವಂತೆ ಒತ್ತಾಯಿಸುತ್ತಿದೆ.
ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ತಿಳಿದುಕೊಳ್ಳುವುದೆ ದೊಡ್ಡ ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸರಕಾರಿ ಕಚೇರಿಗಳಿಗೆ ಕರೊನಾ ಕಂಟಕ ಎದುರಾಗಿದ್ದು, ಮತ್ತೇ ಇಂದು ಎಷ್ಟು ಜನರಿಗೆ ಕರೊನಾ ತಗುಲಲಿದೆ ಎಂಬ ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ.
ಈಗಾಗಲೇ 380ರ ಗಡಿ ತಲುಪಿರುವ ಧಾರವಾಡ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಕಾದು ನೋಡಬೇಕಿದೆ.

