ಕಲಬುರಗಿ : ರಾಜ್ಯಾದ್ಯಂತ ಭಾನುವಾರ ಕೆಪಿಎಸ್ಸಿ ಹಮ್ಮಿಕೊಂಡ ಪರೀಕ್ಷೆಗಳು ಸುಗಮವಾಗಿ ನಡೆದಿದ್ದು, ಕಲಬುರಗಿಯಲ್ಲಿ ಕೆಲ ಕಾಲ ಗೊಂದಲ ಉಂಟಾದ ಪರಿಣಾಮ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಬಾಲಾಜಿ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಪರೀಕ್ಷೆಗೆ ಹಾಜರಾದ ಕೆಲವು ಅಭ್ಯರ್ಥಿಗಳು ಓಎಂಆರ್ ಶೀಟ್ ಭರ್ತಿ ಮಾಡದ ಕೊಟ್ಟ ಹಿನ್ನಲೆಯಲ್ಲಿ ಗದ್ದಲ, ಗಲಾಟೆ ನಡೆದು, ಪ್ರತಿಭಟನೆ ಹಂತ ತಲುಪಿತ್ತು.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥೀಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಫ್ ಡಿ ಎ ಎಸ್ ಡಿ ಎ ಪರೀಕ್ಷೆ ಮುಗಿದ ನಂತರ ಅವರು ಓಎಂಆರ್ ಶೀಟ್ ಭರ್ತಿ ಮಾಡಲು ಪ್ಲಾನ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದಕ್ಕೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಸಹಾಯ ಪಡೆದು ಕೆಲವರು ಫೂಲ್ ಬ್ಲಾಂಕ್ ಆಗಿ ನೀಡಿದ್ದರು ಎಂದು ದೂರಿದರು.
ಕಾಲೇಜು ಮುಖ‍್ಯಸ್ಥರು ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಪರೀಕ್ಷಾರ್ಥಿಗಳು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಗೆ ಮಣಿದ ಕಾಲೇಜ್ ಮುಖ್ಯಸ್ಥರು ರೆಡ್ ಮಾರ್ಕ್ ಹಾಕಿದರು. ಬಳಿಕ ಪರಿಸ್ಥೀತಿ ತಿಳಿಗೊಂಡಿದೆ.