- ಬಲ ಮೊಣಕಾಲಿನ ಮೇಲೆ ಮಚ್ಚೆಗಳಿರುವ ಜನ ಏನನ್ನೂ ಬೇಕಾದರೂ ಸಾಧಿಸಬಲ್ಲಷ್ಟು ಸಮರ್ಥರಾಗಿರುತ್ತಾರೆ.
- ಇವರ ಪತ್ನಿಯು ಒಳ್ಳೆಯ ವಂಶಜದವಳು. ಪತಿಗಿರುವ ಲೋಪಗಳನ್ನು ಆಕೆಯು ತುಂಬುತ್ತಾಳೆ.
- ಈ ವ್ಯಕ್ತಿಯೂ ಬೇರೆ ಹೆಣ್ಣಿನ ಮೇಲೆ ವ್ಯಾಮೋಹವಿದ್ದರೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.
- ಹೆಂಡತಿಗೆ ಗೌರವ ನೀಡುವುದೇ ಈ ಮಚ್ಚೆಗಳಿರುವ ವ್ಯಕ್ತಿಗೆ ಗೌರವ ತರುವಂತಹದು.
- ಕಾಲಿನ ಮೀನಾ ಖಂಡಗಳ ಮೇಲಿನ ಮಚ್ಚೆಗಳು ಶುಭಸೂಚಕವಲ್ಲ, ಇಂತಹ ವ್ಯಕ್ತಿಗಳಿಗೆ ಎನೇ ಬುದ್ದಿವಂತಿಕೆಯಿದ್ದರೂ ಅದು ಶೋಭಿಸಲಾರದು.
- ಆದರೆ ಇವರು ಇತರರ ರಹಸ್ಯವನ್ನು ಬಲು ಬೇಗ ಭೇದಿಸುವರು. ಬೇರೆಯವರ ಬುದ್ದಿವಂತಿಕೆಯನ್ನು ಬಳಸಿಕೊಂಡು ಅವರಿಂದ ಕಲಿಯುವರು.
- ತಮ್ಮ ಸ್ನೇಹಿತರು ಮತ್ತು ಬಳಗದವರಿಗೆ ಆಗಾಗ ಅಲ್ಪ ಸಹಾಯ ಮಾಡಿ ಅವರನ್ನು ತಮ್ಮ ಕಡೆಗೆ ಒಲಿಸಿಕೊಂಡು ಗೌರವ ಸಂಪಾದಿಸುತ್ತಾರೆ.
- ಒಟ್ಟಿನಲ್ಲಿ ಇವರು ಸ್ನೇಹಪರ ವ್ಯಕ್ತಿಗಳು.
- ಮೊಣಕಾಲಿನ ಬಲ ಚಿಪ್ಪಿನ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಬುದ್ದಿ ಚಲದ ಮೇಲೆ ಬದುಕುವ ಜನ.
- ದೈವ ಭಕ್ತಿ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಹಾಗೂ ಸಮಾಜ ಸೇವೆಯಲ್ಲಿ ಇವರಿಗೆ ಆಸಕ್ತಿ ಬಹಳ ಇವರಿಗೆ ಬಿಳಿಯ ಬಟ್ಟೆಗಳ ಮೇಲೆ ಬಲು ಪ್ರೀತಿ.
- ಸದಾ ಶುಚಿಯಾಗಿ ನಾಲ್ಕು ಜನರ ಗಮನ ಸೆಳೆಯಬಲ್ಲರು.
ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು