ಆರೋಗ್ಯ

ಮಲಶುದ್ಧಿಗೆ ಇಲ್ಲಿದೆ ಸಾಕಷ್ಟು ಸರಳ ಉಪಾಯಗಳು

  • ರಾತ್ರಿ ಮಲಗುವ ಮುನ್ನ ಒಂದು ಬಾಳೆಹಣ್ಣು ಅಥವಾ ಎರಡು ಹೋಳು ಪಪ್ಪಾಯಿ ಹಣ್ಣು ತಿನ್ನುವುದರಿಂದ ಮಲಶುದ್ಧಿ.
  • ಆತ್ತಿಯ ಎಲೆಯನ್ನು ಜಜ್ಜಿ ಅರೆದು ಸೋಸಿ 50 ಗ್ರಾಂ ಕಲ್ಲು ಸಕ್ಕರೆಯೊಂದಿಗೆ ದಿನಕ್ಕೆ ಒಂದು ಸಲದಂತೆ 12 ದಿನ ಸೇವಿಸುವುದರಿಂದ ಸರಾಗವಾಗಿ ಮಲವು ವಿಸರ್ಜನೆಯಾಗುವುದು.
  • ಹುರುಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ಆ ನೀರಿಗೆ ನಿಂಬೆಹಣ್ಣಿನ ರಸ ಹಿಂಡಿ ಸ್ವಲ್ಪ ಉಪ್ಪು ಬೇರೆಸಿ ದಿನ ಒಂದು ಗ್ಲಾಸ್ ಕುಡಿಯುವುದರಿಂದ ಮಲಕಟ್ಟು ನಿವಾರಣೆಯಾಗುವುದು.
  • ಪಪ್ಪಾಯಿ ಕಾಯಿಯನ್ನು ಹೋಳು ಮಾಡಿ ಜೀರಿಗೆ ಪುಡಿ, ಕರಿಮೆಣಸಿನ ಪುಡಿ, ನಿಂಬೆರಸ, ಉಪ್ಪು ಸೇರಿಸಿ ಸೇವಿಸುವುದರಿಂದ ಮಲಬದ್ದತೆ ನಿವಾರಣೆ.
  • ಹಸಿ ತರಕಾರಿ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಬಗೆಹರಿಯುವುದು.
  • ಆಲೂಗಡ್ಡೆಯನ್ನು ಹಸಿಯಾಗಿ ಸಿಪ್ಪೆ ಸಹಿತ ಚೆನ್ನಾಗಿ ಅಗೆದು ನಿತ್ಯವು ತಿನ್ನುವುದರಿಂದ ಮಲಬದ್ಧತೆ ಮಾಯ.
  • ಮೂಲಂಗಿ,ಗಜರಿ, ಸೌತೆಕಾಯಿ,ಮೆಂತೆಸೊಪ್ಪು, ಉಳ್ಳಾಗಡ್ಡಿ, ಬಿಟ್ ರೂಟ್ ವಾರದಲ್ಲಿ 3 ದಿನ ಅಗೆದು ತಿನ್ನುವುದರಿಂದ ಮಲವಿಸರ್ಜನೆ ಸರಳವಾಗಿ ಆಗುವುದು.
  • ಸೊರೆಕಾಯಿಯ ರಸ ಒಂದು ಗ್ಲಾಸ್ ಉಪ್ಪು ಸೇರಿಸಿ ದಿನಕ್ಕೆ ಒಂದು ಸಲ ಸೇವಿಸಬೇಕು.
  • ರಾತ್ರಿ ಮಲಗುವಾಗ 10 ರಿಂದ 15 ಒಣದ್ರಾಕ್ಷಿ ಚೆನ್ನಾಗಿ ಅಗೆದು ತಿನ್ನಬೇಕು. ನಂತರ ಒಂದು ಚಮಚ ಆಕಳ ಬೆಣ್ಣಿ ಸೇವಿಸುವುದರಿಂದ ಮಲಶುದ್ಧಿ.
  • ರಾತ್ರಿ ಮಲಗುವಾಗ ಬಿಟ್ ರೂಟ್ ಚೆನ್ನಾಗಿ ಸಣ್ಣಗೆ ಹೋಳು ಮಾಡಿ ಮೊಸರಿನಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ಕೂಡ ಮಲಶುದ್ಧಿ.
  • 30 ಎಂಎಲ್ ಮೊಸರು, 30 ಎಂಎಲ್ ನೊರೆ ಹಾಲು, 3 ಚಮಚ ಎಳ್ಳೆಣ್ಣೆ, 3 ಚಮಚ ಬೆಲ್ಲದ ರವೆ ಮಿಶ್ರಣ ಮಾಡಿ ಸೇವಿಸುವುದರಿಂದ ಮಲಶುದ್ಧಿ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *