- ಒಂದು ಚಮಚ ಬಾದಮಿ ಎಣ್ಣೆ, ಅರ್ಧ ಚಮಚ ನಿಂಬೆ ರಸ ಹಾಗೂ ಅರ್ಧ ಚಮಚ ಶುಂಠಿ ರಸವನ್ನು ಸೇರಿಸಿ ಸೇವಿಸಿದರೆ ದಮ್ಮು ಕಡಿಮೆ ಅಗುತ್ತದೆ.
- 10 ಹನಿ ಬಾದಮಿ ಎಣ್ಣೆಯನ್ನು 1 ಲೋಟ ಬಿಸಿ ಆಕಳ ಹಾಲಿನೊಡನೆ ಸೇವಿಸಿದರೆ ಒಣ ಕೆಮ್ಮು ನಿವಾರಣೆ ಯಾಗುತ್ತೆದೆ.
- ಬಾದಮಿ ಎಣ್ಣೆಯನ್ನು ಕಣ್ಣಿನ ಸುತ್ತ ಪ್ರತಿ ದಿನ ಮಸಾಜ್ ಮಾಡಿದರೆ 2 ವಾರದಲ್ಲಿ ಕಣ್ಣ ಸುತ್ತ ಕಪ್ಪು ನಿವಾರಣೆಯಾಗುತ್ತೆದೆ.
- ಮಕ್ಕಳಲ್ಲಿ ಬುದ್ದಿ ಶಕ್ತಿ ಹಾಗೂ ಸ್ಮರಣ ಶಕ್ತಿ ಹೆಚ್ಚಿಸಲು ರಾತ್ರಿ ನೀರಿನಲ್ಲಿ ನೆನೆಸಿದ ಬಾದಮಿಯನ್ನು ಬೆಳಿಗ್ಗೆ ಅದರ ಸಿಪ್ಪೆ ತೆಗೆದು ಸೇವಿಸಬೇಕು.
- ಬಾದಮಿ ಎಲೆಯನ್ನು ನೀರಿನಲ್ಲಿ ಅರೆದು ಚರ್ಮಕ್ಕೆ ಹಚ್ಚಿದರೆ ಒರಟು ಚರ್ಮ ಮೃಧುವಾಗುವುದು.
- ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾತ್ರಿ ಹಾಲಿನಲ್ಲಿ ನೆನೆಸಿದ ಬಾದಮಿಯನ್ನು ಒಂದು ಚಿಟಿಕೆ ಕೇಸರಿ ಜೊತೆ ಸೇವಿಸಿದರೆ, ಗರ್ಭಿಣಿ ಮತ್ತು ಬೆಳೆಯುವ ಮಗುವಿನ ಆರೋಗ್ಯ ವೃದ್ದಿಸುತ್ತದೆ.
- ನಮ್ಮ ಜೀರ್ಣಾಂಗ ವ್ಯವಸ್ಥೆಯು ಎಷ್ಷು ಚೆನ್ನಾಗಿ ಕಲಸ ಮಾಡುತ್ತದೆ ಎಂಬುದರ ಆಧಾರದ ಮೇಲೆ ನಮ್ಮ ಚರ್ಮದ ಆರೋಗ್ಯ ಅವಲಂಬಿಸಿದೆ. ಮಲ ಬದ್ದತೆಯಿಂದ ಮೊಡವೆ ಇನ್ನಿತರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪ್ರತಿ ದಿನ ನಿಯಮಿತವಾಗಿ ಬಾದಮಿ ತಿನ್ನಿವುದರಿಂದ ಹೊಟ್ಟೆಯಲ್ಲಿ ಜೀರ್ಣ ಕ್ರಿಯೆಗೆ ನೆರವಾಗುತ್ತದೆ.
- ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಶಕ್ತಿ ಬಾದಮಿಗೆ ಇದೆ. ಬಾದಮಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತುಂಬಾ ಒಳ್ಳೆಯದು. ಶ್ರೀಮಂತವಾದ ಆಹಾರವಾದ ಬಾದಮಿಯಲ್ಲಿ ವಿಟಮಿನ್, ಪೊಟ್ಯಸಿಂ, ಮೆಗ್ನಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಖನಿಜ ಹೇರಳವಾಗಿವೆ.
- ನಿಮ್ಮ ಅಡುಗೆಯಲ್ಲಿ ಎರಡು ತೊಟ್ಟು ಬಾದಮಿ ಎಣ್ಣಿ ಸೇರಿದರೆ ರುಚಿಯ ಜೊತೆ ಆರೋಗ್ಯ ಸಹ ವೃದ್ದಿಸುತ್ತದೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

