ಜಿಲ್ಲೆ

ಮರಾಠ ವಿದ್ಯಾಪ್ರಸಾರಕ ಆಡಳಿತ ಮಂಡಳಿ ವಿಸರ್ಜನೆ : ಮಂಜುನಾಥ ಕದಂ

ಧಾರವಾಡ PRAJAKIRAN.COM : ಇಲ್ಲಿಯ ದಿ. ಮರಾಠ ವಿದ್ಯಾಪ್ರಸಾರಕ ಮಂಡಳದ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನಲೆಯಲ್ಲಿ ಸದ್ಯ ಪ್ರಸ್ತುತವಿರುವ ಹಾಲಿ ಆಡಳಿತ ಮಂಡಳಿಯನ್ನು ವಿರ್ಸಜನೆ ಮಾಡಲಾಗಿದ್ದು, ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಅಧ್ಯಕ್ಷ ಮಂಜುನಾಥ ಕದಂ ತಿಳಿಸಿದ್ದಾರೆ.

ಅವರು ಮರಾಠ ವಿದ್ಯಾಪ್ರಸಾರಕ ಮಂಡಳದ ಸಭಾ ಭವನದಲ್ಲಿ ಸಮಾಜದ ಹಿರಿಯಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಆಡಳಿತ ಮಂಡಳಿಯ ಚುನಾವಣೆ ನಡೆಸಲು ಹಿರಿಯರ ಸಲಹೆ ಪಡೆದು ಮಾರ್ಚ್ ನಲ್ಲಿ ನಡೆಸಲು ಸಮಾಜದ ಹಿರಿಯರಾದ ಪರಶುರಾಮ್ ಜಿ. ವಾಡಕರ್ ಅವರಿಗೆ ಚುನಾವಣೆ ಕಮಿಟಿ ಮುಖ್ಯಸ್ಥರಾಗಿ ನೇಮಿಸಿ ಅಧಿಕಾರ ನೀಡಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಕದಂ ತಿಳಿಸಿದರು.

ಇದಕ್ಕೆ ಸಮಾಜದ ಹಿರಿಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸರ್ವರು ಒಪ್ಪಿಗೆ ಸೂಚಿಸಿದರು. ಮರಾಠ ವಿದ್ಯಾಪ್ರಸಾರಕ ಮಂಡಳ ಶತಮಾನೋತ್ತರ ಇತಿಹಾಸ ಹೊಂದಿದ್ದು, ಅದರ ಅಧ್ಯಕ್ಷನಾಗಿ ಸಂಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಿದ ಸಮಾಧಾನ ಹಾಗೂ ಸಂಸ್ಥೆಯ ಏಳ್ಗೆಗೆ ಶ್ರಮಿಸಿದ ತೃಪ್ತಿಯಿದೆ.

ಅದಕ್ಕೆ ಸಹಕರಿಸಿದ ಸಮಾಜ ಬಾಂಧವರಿಗೆ ಹಾಗೂ ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದು ಮಂಜುನಾಥ ಕದಂ ತಿಳಿಸಿದರು. ವಿದೆ.

ನನ್ನಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದ ಮೀಸಲಾತಿ ಹೋರಾಟವಾದ ಏಕ್ ಮರಾಠ ಲಾಖ್ ಮರಾಠ ಬೃಹತ್ ಪ್ರತಿಭಟನೆ, ಸಮಾಜದ ಹಿರಿಯರಿಗೆ ಗೌರವ ಸನ್ಮಾನ, ಸಡಗರ ಸಂಭ್ರಮದ ಶತಮಾನೋತ್ತರ ಕಾರ್ಯಕ್ರಮ,

ತುಳಜಾ ಭವಾನಿ ದೇವಸ್ಥಾನ ಲೋಕಾರ್ಪಣೆ, ಮಂಡಳದಅಡಿ ಬರುವ ಅಂಗಡಿ ಬಾಡಿಗೆ ಹೆಚ್ಚಳ ಮಾಡಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ,

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಅವರಿಂದ 15 ಲಕ್ಷ ಅನುದಾನ ಬಿಡುಗಡೆ, ಪಿಯು ಕಾಲೇಜ್ ನೂತನ ಕಟ್ಟಡ ನಿರ್ಮಾಣ, ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ನೂತನ ಇಂಗ್ಲೀಷ್ ಶಾಲೆ ಆರಂಭ,

8ನೇ ತರಗತಿಯಿಂದ 10 ನೇ ತರಗತಿವರೆಗಿನ ಮರಾಠ ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರವೇಶ ಶುಲ್ಕ ವಿನಾಯಿತಿ, ಅದ್ದೂರಿ ಶಿವ ಜಯಂತಿ ಆಚರಣೆಗೆ ನಾಂದಿ ಹಾಡಿದ ಸಂತಸವಿದೆ ಎಂದು ಮಂಜುನಾಥ ಕದಂ ವಿವರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *