ಹುಬ್ಬಳ್ಳಿ prajakiran.com : ಆ ಮಿಣಿ ಮಿಣಿ ಪೌಡರ್ ಎಲ್ಲಿತ್ತೋ ಎನೋ. ನಾನುಂತೂ ನೋಡಿಲ್ಲ.ಕುಮಾರಸ್ವಾಮಿಯವರೇ ಸೃಷ್ಟಿಸಿದ ಪೌಡರ್ ಇದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅವರು ಮಂಗಳವಾರ ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿ, ಮಿಣಿ ಮಿಣಿ ಪೌಂಡರ್ ಬಗ್ಗೆ ಎಚ್ ಡಿಕೆ ಹೇಳಿಕೆ ವಿಚಾರವಾಗಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿಯವರು ಮಾತನಾಡಿದರೆ ವಿಕೃತ ಮನಸ್ಸು ಅಂತಾರೆ. ಆದರೆ ಕುಮಾರಸ್ವಾಮಿಯವರದ್ದು ವಿಕೃತ ಮನಸ್ಸು ಎಂದು ತಿರುಗೇಟು ನೀಡಿದರು.
ಮಾತ್ತೆತ್ತಿದ್ದರೆ ಸಿಡಿ ಬಿಡುಗಡೆ ಮಾಡುತ್ತೇನೆ. ಸಿಡಿ ಬಿಡುಗಡೆ ಮಾಡುತ್ತೇನೆ ಅನ್ನುವವರದ್ದು ವಿಕೃತ ಮನಸ್ಸು. ಅವರ ಸಿಡಿಗಳು ನಮ್ಮ ಬಳಿಯೂ ಇವೆ.ಅವರ ಬಳಿ ಅಷ್ಟೇ ಸಿಡಿಗಳಿವೆಯಾ ಎಂದು ಕುಟುಕಿದರು.
ಕುಮಾರಸ್ವಾಮಿಯವರು ಎನೇನೂ ಮಾಡುತ್ತಾರೆ ನಮಗೂ ಗೊತ್ತಿದೆ. ನಮಗೂ ಸಿಡಿ ಬಿಡುಗಡೆ ಮಾಡೋಕೆ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು.