ಧಾರವಾಡ prajakiran.com : ಆನ್‌ಲೈನ್‌ನಲ್ಲೇ ಕೇಂದ್ರ ಸಚಿವರೊಬ್ಬರು ಅಧಿಕಾರಿಗಳ ಬೆವರಿಳಿಸಿದ ಘಟನೆ ಧಾರವಾಡದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಡೆದಿದೆ.
ಧಾರವಾಡ ಜಿಪಂ ಸಭಾಭವನದಲ್ಲಿ ಆಯೋಜಿಸಲಾಗಿದ್ದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅಧಿಕಾರಿಗಳ ತೀವ್ರ ತರಾಟೆ ತೆಗೆದುಕೊಂಡರು.
ನವದೆಹಲಿಯಿಂದ ಆನ್‌ಲೈನ್ ನಲ್ಲೇ ನಡೆದ ವಿಡಿಯೋ ಸಂವಾದ ಮೂಲಕ ಸಭೆ ತೆಗೆದುಕೊಂಡ ಜೋಶಿ, ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು.
ಈ ದಿಶಾ ಸಭೆಯಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರ ವಿಚಾರ ಪ್ರಸ್ತಾಪಿಸಲಾಯಿತು.
ಆಗ ಬೇರೆಯವರ ಹೆಸರಿನಲ್ಲಿ ಹಣ ಜಮಾ ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ವಿಷಯದ ಚರ್ಚೆ ನಡೆಯಿತು.
ಈ ಹಿನ್ನೆಲೆ ಜಿಪಂ ಡಾ. ಬಿ.ಸಿ. ಸತೀಶಗೆ ತೀವ್ರ ತರಾಟೆ ತೆಗೆದುಕೊಂಡರಲ್ಲದೆ, ಕೆಲ ಕಾಲ ಸರಿಯಾಗಿ ಬಿಸಿ ತಾಕಿಸಿ ಸಿಇಒ ಬೆವರಿಳಿಸಿದರು.
ಈ ವೇಳೆ ಜೋಶಿಯವರಿಗೆ ಸಮಾಜಾಯಿಸಿ ನೀಡಲು ಹೋಗಿ ಪ್ರಗತಿ ವರದಿಯಲ್ಲಿ ಪದಬಳಕೆ ತಪ್ಪಾಗಿದೆ ಎಂದರು.
ಇದರಿಂದ ಮತ್ತಷ್ಟು ಗರಂ ಆದ ಕೇಂದ್ರ ಸಚಿವ ಜೋಶಿ, ಸಿಇಒಯವರಿಗೆ ಹೀಗೆಲ್ಲ ದಾರಿ ತಪ್ಪಿಸಲಯ ಯತ್ನಿಸಬೇಡಿ.
ನನ್ನ ಬಳಿ ಉದ್ಯೋಗ ಖಾತ್ರಿ ಹಣ ದುರುಪಯೋಗ ದಾಖಲೆಗಳಿವೆ ಎಂದು ತೋರಿಸಿದರು,
ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಅವ್ಯವಹಾರದ ದಾಖಲೆ ತೋರಿಸಿ, ತಪ್ಪಿತಸ್ಥರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಇಒಗೆ ಖಡಕ್ ವಾರ್ನಿಂಗ್ ಕೊಟ್ಟರು.
ಧಾರವಾಡ ಸಂಸದರು ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೆಂಡಾಮಂಡಲವಾಗಿದ್ದು ಕಂಡು ಇದರಿಂದಾಗಿ ಸಭೆಯಲ್ಲಿ ನೆರೆದಿದ್ದ ಅಧಿಕಾರಿಗಳು ತಬ್ಬೀಬ್ಬುಗೊಂಡರು.



