ಅಪರಾಧ

ಪಾಟ್ನಾ ಎನ್ ಐ ಎ ವಶಕ್ಕೆ ಉಗ್ರ ಮುನಿರುಲ್ ಶೇಖ್

ಬೆಂಗಳೂರು : ರಾಮನಗರದಲ್ಲಿ ಸಿಕ್ಕಿ ಬಿದ್ದ ಉಗ್ರ ಮುನಿರುಲ್ ಶೇಖ್ ನನ್ನು ಪಾಟ್ನಾ ಎನ್ಐಎ ವಶಕ್ಕೆ ನೀಡಲಾಗಿದೆ.

ಉಗ್ರ ಮುನಿರುಲ್ ಶೇಖ್ ನನ್ನು ಮಂಗಳವಾರ ಬೆಂಗಳೂರಿನ ಎನ್ ಐ ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಆತನ ಮೇಲೆ ಪಾಟ್ನಾದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲು ಆಗಿರುವ ಹಿನ್ನಲೆಯಲ್ಲಿ ಆತನಿಗೆ ಟ್ರ್ಯಾನ್ಸಿಟ್ ರಿಮಾಂಡ್ ಗೆ ಒಪ್ಪಿಸಲಾಗಿದೆ.

ಈತನ ಮೇಲೆ ಬೌದ್ಧ ಗಯಾ ಹಾಗೂ ಬೌದ್ದ ಮಂದಿರ ಸ್ಪೋಟ ಮಾಡಿದ ಗಂಭೀರ ಆಪಾದನೆಗಳಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಆತನನ್ನು ನ್ಯಾಯಾಧೀಶರು ಪಾಟ್ನಾಕ್ಕೆ ಕರೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ.

ಅಲ್ಲಿಯೇ ಇನ್ನಷ್ಟು ವಿಚಾರಣೆ ನಡೆಸಿದ ಬಳಿಕ ಮತ್ತೇ ಬೆಂಗಳೂರಿಗೆ ವಾಪಾಸ್ಸು ಕರೆದುತರಲಾಗುವುದು. ಇನ್ನೂ ಇದೇ ವೇಳೆ ಹೈದ್ರಾಬಾದ್ ನಲ್ಲೂ ಕೂಡ ಇನ್ನಷ್ಟು ಶಂಕಿತ ಉಗ್ರರ ವಿಚಾರಣೆ ನಡೆಸುತ್ತಿದ್ದು, ಬಾಂಗ್ಲಾ ದೇಶದ ಭಯೋತ್ಪಾದನೆ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಮಾಹಿತಿ ಕಲೆ ಹಾಕಲಾಗುತ್ತಿದೆ. ಇವರು ಕೂಡ ಹಲವಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *