ರಾಜ್ಯ

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ

ಮಂಡ್ಯ : ರಾಜ್ಯ ರಾಜಕಾರಣದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಹಾಗೂ ತಂದೆ ಹೆಚ್.ಡಿ. ಕುಮಾರಸ್ವಾಮಿ, ದೊಡ್ಡಪ್ಪ ಹೆಚ್.ಡಿ. ರೇವಣ್ಣ, ಶಾಸಕಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟುರಾಜು ಸೇರಿದಂತೆ ಹಲವರು ಸಾಥ್ ನೀಡಿದರು.

ಮಂಡ್ಯದ ಶಕ್ತಿ ದೇವತೆ ಕಾಳಿಕಾಂಬೆ ದೇವಾಲಯದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಕಲಾತಂಡಗಳು, ಸಹಸ್ರಾರು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ವೇಳೆ ಎತ್ತಿನಗಾಡಿ ಏರಿದ ಜಾಗ್ವಾರ್ ನಟ ನಿಖಿಲ್ ಕುಮಾರಸ್ವಾಮಿ ಎಲ್ಲರೊಂದಿಗೆ ಬೆರತು, ಕೈ ಕುಲಕಿ, ಸಂಭ್ರಮಿಸಿದರು. ದಳಪತಿಗಳು ಮೆರವಣಿಗೆಯ ಎತ್ತಿನಗಾಡಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮಲ್ಲನಾಯಕನಕಟ್ಟೆಯ ಪ್ರಮೋದ್, ಬೀರಗೌಡನಹಳ್ಳಿಯ ಶಂಕರಲಿಂಗೇಗೌಡ ಅವರ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆದಿದ್ದು ವಿಶೇಷವಾಗಿತ್ತು. ಹೊರೆಹೊತ್ತ ಮಹಿಳೆಯರ ಸಖತ್ ಡ್ಯಾನ್ಸ್ ಮಾಡಿದರು. ಮೆರವಣಿಗೆ ಮುಂದೆ ಸಾಗುತ್ತಿದ್ದ ತೆರೆದ ವಾಹನದಲ್ಲಿ ಹೊರೆ ಹೊತ್ತ ಯುವತಿಯರ ನೃತ್ಯ ನಡೆಯಿತು.

ತಮಟೆ, ಡೊಳ್ಳು ಕುಣಿತದ ಶಬ್ಧ, ಡಿಜೆ ಸೌಂಡಿಗೆ ಹೊರೆ ಹೊತ್ತ ಯುವತಿಯರ ಸಕತ್ ಸ್ಟೆಪ್ಸ್ ಹಾಕಿದರು. ಹಸಿರು ಸೀರೆ, ಕೆಂಪು ಬಣ್ಣದ ಬ್ಲೌಸ್ ಧರಿಸಿ ಹುಲ್ಲಿನ ಕಂತೆ ಹೊತ್ತಿರುವ ಯುವತಿಯರು. ಟಗರು ಸಿನಿಮಾದ ಸಾಂಗ್ ಗೆ ಸಖತ್ ಸ್ಟೆಪ್ ಹಾಕಿದರು.

ಡಿಜೆ ಅಬ್ಬರ ಮುಗಿಲು ಮುಟ್ಟಿತ್ತು. ಎಸ್ಪಿ ಕಚೇರಿ ಮುಂದೆಯೇ ಡಿಜೆ ಅಬ್ಬರ ಜೋರಾಗಿತ್ತು. ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲೇ ಜೆಡಿಎಸ್ ಸಮಾವೇಶ ನಡೆಯಿತು.

ಕಾವೇರಿ ವನದ ಪಕ್ಕದಲ್ಲೇ ಇರುವ ಸರ್ಕಾರಿ ಕಚೇರಿಗಳು ಅದರಲ್ಲೂ ಎಸ್ಪಿ ಕಚೇರಿ, ವಾರ್ತಾ ಇಲಾಖೆ, ಜಿಲ್ಲಾ ಖಜಾನೆ ಕಚೇರಿಗಳು ಇಲ್ಲಿವೆ. ಆದರೆ ಯಾರೊಬ್ಬರು ಕ್ಯಾರೆ ಎನ್ನಲಿಲ್ಲ.

Please follow and like us:

Leave a Reply

Your email address will not be published. Required fields are marked *