ರಾಜ್ಯ

ಕಾಂಗ್ರೆಸ್ ನಿಂದ ಆರ್.ಧೃವನಾರಾಯಣ ನಾಮಪತ್ರ

ಬಿಳಿಗಿರಿ ಶ್ರೀನಿವಾಸ್

ಚಾಮರಾಜನಗರ : ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಭಾರಿಯಾಗಿ ಲೋಕಸಭಾ ಅಭ್ಯಾರ್ಥಿಯ ಸ್ಥಾನಕ್ಕೆ ಆಯ್ಕೆ ಬಯಸಿ ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಗಿ ಗ್ರಾಮದ ಆರ್.ಧೃವನಾರಾಯಣ ಅವರು ಸೋಮವಾರ ನಾಮಪತ್ರವನ್ನು ಸಲ್ಲಿಸಿದರು.,

ಚಾಮರಾಜನಗರದ ಕೊಳದ ಗಣೇಶ, ಹಾಗೂ ಹಳೆ ಬಸ್ ನಿಲ್ದಾಣದ ಮಾರಿಯಮ್ಮ, ಮತ್ತು ಚಾಮರಾಜೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಚಾಮರಾಜೇಶ್ವರ ದೇವಾಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಹಾಗೂ ಚುನಾವಣೆ ಅಧಿಕಾರಿ ಬಿ.ಬಿ.ಸ ಕಾವೇರಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಧೃವನಾರಾಯಣ ಅವರ ನಾಮಪತ್ರ ಸಲ್ಲಿಸಲು ಅವರ ಜೊತೆಗೆ ಚಾಮರಾಜನಗರ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ನರೇಂದ್ರ, ವರುಣ ಶಾಸಕ ಯತೀಂದ್ರ, ಹಾಗೂ ಹೆ.ಡಿ.ಕೋಟೆ ಶಾಸಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಾದಸ್ವರ ವಾದ್ಯ, ಚಂಡೆವಾದ್ಯ, ಡೋಲ್ಲು ಕುಳಿತ ಕಲಾವಿದರು ಭಾಗವಹಿಸಿದ್ದರು. ಚಾಮರಾಜನಗರ, ಕೊಳ್ಳೇಗಾಲ ಯಳಂದೂರು, ಗುಂಡ್ಲುಪೇಟೆ, ವರುಣ, ಹೆಚ್.ಡಿ.ಕೋಟೆಯಿಂದ ಧೃವನಾರಾಯಣ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಜನರು ಮೆರವಣಿಗೆಯಲ್ಲಿ ಆಗಮಿಸಿದ್ದರು.

ಸಂಸದ ಹಾಗೂ ಹಾಲಿ ಅಭ್ಯರ್ಥಿಯಾಗಿರುವ ಧೃವನಾರಾಯಣ ಅವರು ಮಾತನಾಡಿ, ಈ ಭಾರಿಯು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಸಿದ್ದೆನೆ ಮೊದಲು ಕಾಂಗ್ರೆಸ್ ಪಕ್ಷ ಮಾತ್ರ ನನಗೆ ಬೆಂಬಲ ವ್ಯಕ್ತ ಪಡಿಸುತ್ತಿತ್ತು.ಈಬಾರಿ ಸಂಮಿಶ್ರ ಸರ್ಕಾರ ವಿರುವುದ ರಿಂದ ಜೆ.ಡಿ.ಎಸ್ ಕಾರ್ಯಕರ್ತರು ಸಹ ನಮ್ಮ ಜೊತೆ ಇದ್ದಾರೆ. ಈ ಕ್ಷೇತ್ರದ ಶಾಸಕರಾದ ಸಿ,ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ನರೇಂದ್ರ, ಸಿದ್ದರಾಮಯ್ಯ ಪುತ್ರರಾದ ಯತೀಂದ್ರ ಅವರ ವರುಣ ಕ್ಷೇತ್ರ ಹಾಗೂ ಹೆಚ್,ಡಿ.ಕೋಟೆ ಶಾಸಕ ಚಿಕ್ಕಮಾದು ಅವರ ಪುತ್ರ ಅನಿಲ್ ಅವರ ಸಹಕಾರ ನನಗೆ ಬಹಳ ಇದೆ. ಈಭಾರಿ ಬಾರಿ ಬಹುಮತದಿಂದ ಜಯಗಳಿಸಲಿದ್ದೆನೆ.ಎಂದು ತಿಳಿಸಿದರು.

ನಮ್ಮ ಕ್ಷೇತ್ರದಲ್ಲಿ ಲೋಕಸಭಾ ಅನುದಾನದಲ್ಲಿ ನಾ ಮಾಡಿರುವ ಕೆಲಸಗಳೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *