ಬೆಂಗಳೂರು : ಬಹುಭಾಷಾ ನಟ, ರಂಗಭೂಮಿ ತಜ್ಞ, ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ತಮ್ಮ ಸಾವಿನ ನಂತರ ಯಾವುದೇ ಧಾರ್ಮೀಕ ವಿಧಿ ವಿಧಾನಗಳ ಆಚರಣೆಯಿಲ್ಲದೆ, ಸರಳವಾಗಿ ಅಂತಿಮ ಯಾತ್ರೆ ಮುಗಿಸುವಂತೆ ಸೂಚಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.
ಹೀಗಾಗಿ ಅವರು ಕುಟುಂಬಸ್ಥರು ರಾಜ್ಯದ ಸಮ್ಮೀಶ್ರದ ಸರಕಾರದ ಸಕಲ ಸರಕಾರಿ ಗೌರವವನ್ನು ನಿರಾಕರಿಸಿದ್ದಾರೆ.
ಅವರ ಕುಟುಂಬದವರೊಂದಿಗೆ ಮುಖ್ಯಮಂತ್ರಿ ಕಚೇರಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿಯಾಗಿ ಮನವೊಲಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಲ್ಲದೆ, ಇದೊಂದು ಕೇವಲ ಕೌಟುಂಬಿಕ ಹಾಗೂ ಆಪ್ತರಿಗೆ ಮಾತ್ರ ಸಿಮೀತವಾಗಿದ್ದು, ಮಧ್ಯಾಹ್ನ ಮೂರು ಗಂಟೆಗೆ ವಿದ್ಯುತ್ ಚಿತಾಗಾರದಲ್ಲಿ ಸರಳವಾಗಿ ಯಾವುದೇ ಧಾರ್ಮಿಕ ವಿಧೀ ವಿಧಾನಗಳನ್ನು ಆಚರಿಸದೆ ನೆರವೇರಿಸಲು ನಿರ್ಧರಿಸಲಾಗಿದೆ.
ಹೀಗಾಗಿ ಮನೆಗೆ ಯಾರೊಬ್ಬರು ಆಗಮಿಸುವುದು ಬೇಡ. ಮಧ್ಯಾಹ್ನ ಮೂರು ಗಂಟೆಗೆ ವಿದ್ಯುತ್ ಚಿತಾಗಾರಕ್ಕೆ ಆಗಮಿಸಿದರೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಗಿರೀಶ್ ಕಾರ್ನಾಡ್ ಅವರ ಆತ್ಮೀಯರಲ್ಲಿ ಒಬ್ಬರಾದ ನಿರ್ದೇಶಕ ಕೆ.ಎಂ. ಚೈತನ್ಯ ಮನವಿ ಮಾಡಿದ್ದಾರೆ.