ಆಧ್ಯಾತ್ಮ

ಬ್ರಾಹ್ಮಣರ ಅಡುಗೆಗಳಲ್ಲಿ ಈ ತರಕಾರಿ ನಿಷಿದ್ದ ಯಾಕೆ ಗೊತ್ತಾ ?

ಮನೆಯಲ್ಲಿ ಹಬ್ಬ, ಹರಿದಿನ, ಪೂಜೆ, ಹವನ ಮುಂತಾದ ದೇವ ಕಾರ್ಯಗಳಿರುವಾಗ ಅಡುಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಅದಕ್ಕೆ ಕಾರಣ ಸಮುದ್ರ ಮಂಥನದ ನಂತರ ಮೋಹಿನಿಯ ವೇಷವನ್ನು ಧರಿಸಿ ಮಹಾವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ. ಅದನ್ನರಿತ ರಾಹು ಹಾಗೂ ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ.

ಪ್ರಮಾದದಿಂದ ವಿಷ್ಣು ಅವರಿಗೂ ಅಮೃತವನ್ನು ಹಂಚುತ್ತಾನೆ. ಅವರಿಬ್ಬರು ಅಸುರರೆಂಬ ಮಾಹಿತಿಯನ್ನು ಮಹಾವಿಷ್ಣುವಿಗೆ ನೀಡುತ್ತಾರೆ. ಅಷ್ಟರಲ್ಲಿ ಅವರಿಬ್ಬರೂ ಅಮೃತವನ್ನು ಕುಡಿದಾಗಿತ್ತು. ಆದರೆ ಅಮೃತ ಗಂಟಲಿನಿಂದ ಇಳಿದು ದೇಹ ಸೇರಲಿಲ್ಲ. ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆಯನ್ನು ಕಡಿಯುತ್ತಾನೆ. ಅಮೃತವನ್ನು ಕುಡಿದಿದ್ದರಿಂದ ಅವರ ತಲೆ ನಾಶವಾಗುವುದಿಲ್ಲ. ಕೇವಲ ದೇಹಾಂತ್ಯವಾಗುತ್ತದೆ. ಆ ಕಾರಣದಿಂದ ಇಂದಿಗೂ ರಾಹು ಕೇತುಗಳಿಗೆ ಶರೀರವಿಲ್ಲ. ಕೇವಲ ಶಿರವಷ್ಟೇ ಇದೆ.

ಮಹಾವಿಷ್ಣು ಶಿರವನ್ನು ತುಂಡರಿಸುವಾಗ ಅವರ ಬಾಯಲ್ಲಿದ್ದ ಅಮೃತ ಬಿಂದುಗಳು ನೆಲವನ್ನು ಸೇರಿದವು. ಆಗಲೇ ಹುಟ್ಟಿದ್ದು ಈರುಳ್ಳಿ ಹಾಗೂ ಬೆಳ್ಳುಳ್ಳಿ. ಇದಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಅಮೃತಕ್ಕೆ ಸರಿಸಮವಾದ ಔಷಧಿಯ ಗುಣಗಳಿವೆ. ಹಾಗೆ ರಾಕ್ಷಸರ ಬಾಯಿಯ ಎಂಜಲೂ ಸೇರಿದ್ದರಿಂದ ದುರ್ಗಂಧ ಹಾಗೂ ಅಪವಿತ್ರವೆಂಬ ಕುಖ್ಯಾತಿಯೂ ಸೇರಿಕೊಂಡಿದೆ. ಹಾಗಾಗಿ ದೇವ ಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ವ್ಯಜ್ಯವಾಗಿದೆ.

ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಶರೀರ ರಾಕ್ಷಸರಂತೆ ಗಟ್ಟಿ ಮುಟ್ಟಾದರೂ ಆಚಾರ-ವಿಚಾರಗಳು ಸಹ ರಾಕ್ಷಸರಂತಾಗುತ್ತವೆ. ನಾವು ತಿನ್ನುವ ಆಹಾರ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ ಎಂಬುದು ಅವರ ಲೆಕ್ಕಚಾರ.

ಇನ್ನೊಂದು ಪೌರಾಣಿಕ ಕಥೆಯಲ್ಲಿ ಮಹರ್ಷಿ ವಿಶ್ವಮಿತ್ರಾರೂ ಈರುಳ್ಳಿ, ಬೆಳ್ಳುಳ್ಳಿ, ಬದನೆಕಾಯಿ, ಮೂಲಂಗಿ, ಬಸಲೆ, ಹರಿವೆ ಸೊಪ್ಪು ಇನ್ನೂ ಅನೇಕ ವಸ್ತುವನ್ನು ಹುಟ್ಟಿಸಿದ್ದು, ವಿಶ್ವಮಿತ್ರಾ. ಇವರು ಮೂಲತಃ ಕ್ಷತ್ರೀಯ ಆದುದರಿಂದ ಇವರಿಂದ ಹುಟ್ಟಲ್ಲಪಟ್ಟ ವಸ್ತುವನ್ನು ಅಪವಿತ್ರ ಎಂದು ಬಿಂಬಿಸಲಾಗಿದೆ.

ಸ್ವರ್ಗದಿಂದ ತಂದ ಗಾಯತ್ರಿಯನ್ನು ಹಾಗೂ ಗಾಯತ್ರಿ ಮಂತ್ರವನ್ನು ಎಲ್ಲ ಸ್ಥಳದಲ್ಲಿ ಅಂದರೆ ಹಬ್ಬ, ಹರಿದಿನ, ಪೂಜೆ, ಹವನ, ದೇವಕಾರ್ಯಗಳಲ್ಲಿ ಬ್ರಹ್ಮ ಉಪದೇಶದಲ್ಲಿ ಮೊದಲು ಗಾಯತ್ರಿಮಂತ್ರ ಪಠಣ ಮಾಡಬೇಕು. ಹೀಗೆ ವಿಶ್ವಮಿತ್ರರ ಸಾಧನೆ ಅಪಾರ. ಆದರೆ ಕೆಲವೊಂದು ಅವಶ್ಯ ಇರುವ ವಸ್ತುಗಳು ಎಲ್ಲರಿಗೂ ಬೇಕು. ಅವಶ್ಯಕತೆ ಇಲ್ಲದ ವಸ್ತುವಿಗೆ ನೋಡುವ ದೃಷ್ಟಿಬೇರೆಯಾಗುವುದು ಸರಿಯೇ.

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು,

Please follow and like us:

Leave a Reply

Your email address will not be published. Required fields are marked *