ಬೆಂಗಳೂರು : ರೌಡಿ ಶೀಟರ್ ನಾಗನ ಮನೆಯ ಮೇಲೆ ಕಳೆದ ಎಪ್ರಿಲ್ ನಲ್ಲಿ ದಾಳಿ ನಡೆಸಿದ್ದ ವೇಳೆ ಪತ್ತೇಯಾಗಿದ್ದ ಹಳೆಯ ನೋಟುಗಳಿಗೆ ಹೆಣ್ಣೂರು ಪೊಲೀಸ್ ಕಾವಲು ಕಾಯುವ ಪರಿಸ್ಥಿತಿ ಬಂದಿದೆ.
ಹೌದು ಅಚ್ಚರಿಯಾದ್ರೂ ಇದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.ದಾಳಿಯ ಸಂದರ್ಭದಲ್ಲಿ 17 ಕೋಟಿ ಮೌಲ್ಯದ ಹಳೆಯ ನೋಟುಗಳು ಪತ್ತೆಯಾಗಿದ್ದವು.
ಆಗ ಪೊಲೀಸರುಅವುಗಳನ್ನು ಜಪ್ತಿ ಮಾಡಿ, ತಮ್ಮ ವಶದಲ್ಲಿರಿಸಿಕೊಂಡಿದ್ದರು. ಅಲ್ಲದೆ, ಪ್ರಕರಣ ನ್ಯಾಯಾಯಲದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದಅವುಗಳ ಕಾಯುವ ಪರಿಸ್ಥೀತಿ ಪೊಲೀಸರ ಮೇಲಿದೆ.
ಈ ಬಗ್ಗೆ ಪೊಲೀಸ್ ಇಲಾಖೆ ಆರ್ ಬಿ ಐ ಹಾಗೂ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಆದರೆ ಆರ್ ಬಿ ಐ ಪೊಲೀಸರು ಸೀಜ್ ಮಾಡಿದ ಹಣವನ್ನು ನಿಯಮಾವಳಿ ಪ್ರಕಾರ ಸ್ವೀಕರಿಸುವಂತಿಲ್ಲ. ಇದಕ್ಕೆ ಕೇಂದ್ರ ಸರಕಾರದ ಕಾನೂನು ಅಡ್ಡಿಯಾಗಿದ್ದು, ಈಬಗ್ಗೆ ಕೇಂದ್ರ ಹಣಕಾಸು ಇಲಾಖೆಯೇ ಆರ್ ಬಿ ಐಗೆ ಸೂಚನೆ ನೀಡಿದರೆ ಈ ಬಗ್ಗೆ ಪರಿಶೀಲಿಸಲು ಅವಕಾಶವಿದೆ.
ಇದರಿಂದಾಗಿ ಇದೀಗ ಪೊಲೀಸರು ಕೇಂದ್ರ ಹಣಕಾಸು ಇಲಾಖೆಯತ್ತ ಮುಖ ಮಾಡಿದ್ದಾರೆ. ಪರವಾನಿಗೆ ಸಿಗುವರೆಗೆ ಹೆಣ್ಣೂರು ಪೊಲೀಸರು ಈ ನೋಟುಗಳಿಗೆ ಕಾವಲು ಕಾಯಲೇ ಬೇಕಿದೆ.
ಚನ್ನಪಟ್ಟಣ : ರಾಜ್ಯದ ಎಲ್ಲ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಅವರು ಸೋಮವಾರ ರಾಮನಗರ ಜಿಲ್ಲಾ ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಖಾಸಗಿ ಶಾಲೆಗಳಲ್ಲಿ 50 ಸಾವಿರ, 1 ಲಕ್ಷ ಕೊಟ್ಟು ಪ್ರವೇಶ ಪಡೆಯುತ್ತಾರೆ. ಅಂತಹ ಮಕ್ಕಳಿಗೆ ಏಕೆ 900 ಕೋಟಿ ಅನುದಾನ ನೀಡಿ ಉಚಿತ ಬಸ್ ನೀಡಬೇಕು. ಅದು ಸಾಧ್ಯವಿಲ್ಲ ಎಂದರು. ಕೇವಲ ಸರಕಾರಿ ಶಾಲೆಗೆ ಹೋಗುವ ಮಗುವಿಗೆ […]
ಕೊಡಗು : ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಹಾಮಳೆಗೆ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಗೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಹಾಗೂ ಮಡಿಕೇರಿ ಜಿಲ್ಲಾ ಉಸ್ತುವಾರಿ ಸಾ.ರಾ. ಮಹೇಶ ಜೊತೆಗೆ ತೆರಳಿ ಪರಿಶೀಲನೆ ನಡೆಸಿದರು. ವಸ್ತು ಸ್ಥಿತಿ ಅವಲೋಕಿಸಿದ ಅವರು ತಕ್ಷಣ ಕೈ ಗೊಳ್ಳಬೇಕಾದ ಕ್ರಮಗಳು ಕುರಿತು ಜಿಲ್ಲಾಡಳಿತಗೊಂದಿಗೆ ಸಮಾಲೋಚಿಸಿದರು. ಅಲ್ಲದೆ, ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸುವಂತೆ ಸೂಚಿಸಿದರು. ಈಗಾಗಲೇ ವರುಣನ ಅಬ್ಬರಕ್ಕೆ ನಲಗು ಹೋಗಿರುವ ಮಂಜಿನ ನಗರಿಯ ಅನೇಕ ಕಡೆ ಭೂ ಕುಸಿತಗೊಂಡು […]
ರಾಮನಗರ : ರೈತರ ಜಮೀನಿಗೆ ಸೂಕ್ತ ಪರಿಹಾರ ಧನ ನೀಡದೆ ವಿದ್ಯುತ್ ಸರಬರಾಜು ಕಂಪನಿಯ ವತಿಯಿಂದ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ 25ಕ್ಕೂ ಹೆಚ್ಚು ರೈತರನ್ನು ಬಂಧಿಸಿದ ಘಟನೆ ಸಿಎಂ ಕುಮಾರಸ್ವಾಮಿ ಅವರ ತವರು ಕ್ಷೇತ್ರ ರಾಮನಗರದಲ್ಲಿ ನಡೆದಿದೆ. ಕನಕಪುರದಿಂದ ತಮಿಳನಾಡಿಗೆ ಸರಬರಾಜು ಮಾಡಲು ಉದ್ದೇಶಿಸಿರುವ ವಿದ್ಯುತ್ ಸರಬರಾಜು ಕಾಮಗಾರಿ ಖಂಡಿಸಿ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೆ, ಕೆಲವರು ವಿಷದ ಬಾಟಲ್ ಹಿಡಿದು ಪ್ರತಿಭಟಿಸುತ್ತಿದ್ದರು. ಹೀಗಾಗಿ ಪೊಲೀಸರು ಕೆಲ […]