ಧಾರವಾಡ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಸಚಿವ ವಿದ್ವಾನ್ ಪಿ.ಆರ್.ಪಾಗೋಜಿ ಅವರಿಗೆ ಶ್ರೀ ರಾಮಶಾಸ್ತ್ರೀ ಪುರಸ್ಕಾರ ಲಭಿಸಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿಯ ಸಂಸ್ಕೃತ ಸಂರಕ್ಷಕ ಸಂಘವು ಪ್ರತಿ ವರ್ಷ ಸಂಸ್ಕೃತ ಭಾಷೆಯ ಬೆಳವಣಿಗೆಗೆ ಶ್ರಮಿಸಿದವರಿಗೆ ನೀಡುವ ಶ್ರೀ ರಾಮಶಾಸ್ತ್ರೀ ಪುರಸ್ಕಾರಕ್ಕೆ ಪಾಗೋಜಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಂಸ್ಕೃತ ಸಂರಕ್ಷಕ ಸಂಘವು ಜು.೨೩ ರಿಂದ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಸ್ತರೀಯ ವಿದ್ವತ್ ಗೋಷ್ಠಿ ಹಾಗೂ ಶ್ರೀ ಚಿದಂಬರ ಪಂಚಾಂಗ ಸಂಸ್ಥಾಪಕ ರಾಮಕೃಷ್ಣ ಜೋಶಿ ಅವರ ೧೦೩ ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಪಾಗೋಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮೂಲತಃ ಧಾರವಾಡ ತಾಲೂಕಿನ ಕಲಕೇರಿ ಗ್ರಾಮದವರಾದ ಪ್ರಕಾಶ ಪಾಗೋಜಿ, ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ಸಧ್ಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.