ಆರೋಗ್ಯ

ಮೂಲವ್ಯಾದಿ ರಕ್ತ ಮೂಲವ್ಯಾದಿ

  • ಹನ್ನೇರಡು ಗ್ರಾಂ ಏಳ್ಳನ್ನು ಹನ್ನೇರಡು ಗ್ರಾಂ ಬೆಣ್ಣೆಯಲ್ಲಿ ಅರೆದು ನಿತ್ಯ ಬೆಳಿಗ್ಗೆ ತಿನ್ನುವುದರಿಂದ ರಕ್ತ ಮೂಲವ್ಯಾದಿ ನಿವಾರಣೆ. ಒಂದರಿಂದ ಎರಡು ವಾರ ಸೇವಿಸಬೇಕು.
  • ಈರುಳ್ಳಿಯನ್ನು ತುರಿದು ಮೊಸರಿನಲ್ಲಿ ನಿತ್ಯ ಎರಡು ಸಾರಿ ಸೇವಿಸುವುದರಿಂದ ರಕ್ತ ಮೂಲವ್ಯಾದಿ ಗುಣವಾಗುವುದು.
  • ನಿತ್ಯ ಬೆಳಿಗ್ಗೆ ಅರವತ್ತು ಎಂ.ಎಲ್ ಮೂಲಂಗಿ ರಸಕ್ಕೆ ಮೂವತ್ತು ಎಂ.ಎಲ್ ತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ರಕ್ತ ಮೂಲವ್ಯಾದಿ ಗುಣವಾಗುವುದು. ಒಂದರಿಂದ ಎರಡು ವಾರ ಸೇವಿಸಬೇಕು.
  • ಬೇರೆ ಆಹಾರ ಬಿಟ್ಟು ಬರೀ ಸೌತೆಕಾಯಿಯ ರಸವನ್ನ ಮಾತ್ರ ಸೇವಿಸುತ್ತಿದ್ದರೆ, ರಕ್ತ ಮೂಲವ್ಯಾದಿ ಗುಣವಾಗುತ್ತದೆ. ದಿವಸಕ್ಕೆ ನಾಲ್ಕು ಬಾರಿ ಎರಡು ವಾರದಿಂದ ಮೂರು ವಾರ ಸೇವಿಸಬೇಕು.
  • ಮೂಲವ್ಯಾದಿ ಇಲ್ಲವೇ ಬೇರೆ ಕಾರಣದಿಂದ ಗುದ ದ್ವಾರದಿಂದ ರಕ್ತಸ್ರಾವವಾಗುತ್ತಿದ್ದರೆ ಊಟವಾದ ಕೂಡಲೇ ಇಡೀ ಲಿಂಬೆ ಹಣ್ಣನ್ನು ಹಾಗೇಯೇ ಹಲ್ಲಿನಿಂದ ಕಚ್ಚಿ ಪೂರ್ಣ ರಸ ಹೀರಬೇಕು. ಉಪ್ಪು, ಕಾರ, ಹುಳಿ. ಮಸಾಲೆ ಕಡಿಮೆ ಸೇವಿಸಬೇಕು. ಈ ರೀತಿ ಎರಡರಿಂದ ಮೂರು ವಾರ ಸೇವಿಸಬೇಕು.
  • ನೆಲ್ಲಿ ಚೆಟ್ಟಿನ ಚೂರ್ಣ 20 ಗ್ರಾಂ ನಿತ್ಯ ಬೆಳಿಗ್ಗೆಯೊಮ್ಮೆ 1,20 ಮೊಸರಿನಲ್ಲಿ ಸೇರಿಸಿ ಕುಡಿಯುವುದರಿಂದ ರಕ್ತ ಮೂಲವ್ಯಾದಿ ಗುಣವಾಗುವುದು.
  • ಹನ್ನೇರಡು ಗ್ರಾಂ ಬೇವಿನ ತೊಗಟೆಯ ಗಂಧ ತೆಗೆದು ಒಂದು ಗ್ಲಾಸ್ ಮೇಕೆ ಹಾಲು ಕದಡಿ ನಿತ್ಯ ಬೆಳಿಗ್ಗೆ ಸೇವಿಸುವುದರಿಂದ ಮೂಲವ್ಯಾದಿ ಗುಣವಾಗುವುದು.
  • ನಿತ್ಯ ಎರಡು ಹೊತ್ತು12 ಗ್ರಾಂ ಅಳಲೆ ಕಾಯಿ ಚೂರ್ಣವನ್ನು ಬೆಲ್ಲದಲ್ಲಿ ಕಲಿಸಿ ತಿನ್ನುವುದರಿಂದ ಮೂಲವ್ಯಾದಿ ಪರಿಹಾರ. ಎರಡರಿಂದ ಮೂರು ವಾರ ಸೇವಿಸಬೇಕು.

 

  • ಹತ್ತು ಗ್ರಾಂ ಉಳ್ಳಾಗಡ್ಡೆ ರಸಕ್ಕೆ ಮೂವತ್ತು ಗ್ರಾಂ ಕಲ್ಲು ಸಕ್ಕರೆ ನಿತ್ಯ ಬೆಳಿಗ್ಗೆ ಒಂದರಿಂದ ಎರಡು ವಾರ ಸೇವಿಸಿದರೆ ಮೂಲವ್ಯಾದಿ ನಿವಾರಣೆಯಾಗುವುದು.

 

  • ಒಣಗಿದ ಸೂರಣ ಗಡ್ಡೆಯ ಚೂರ್ಣ ಆರು ಗ್ರಾಂ ಗೆ ಜೇನುತುಪ್ಪ, ಕಲ್ಲು ಸಕ್ಕರೆ ಹಾಗೂ ಆಕಳ ತುಪ್ಪ ಸೇರಿಸಿ ಎರಡರಿಂದ ಮೂರು ವಾರ ಸೇವಿಸುವುದರಿಂದ ಮೂಲವ್ಯಾದಿ ಪರಿಹಾರ ಆಗುವುದು.

 

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *