ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡು ಬಿಸಿ ತಾಕಿಸಿದರು.
ಆಸ್ಪತ್ರೆಯ ಪ್ರಸೂತಿ ಹಾಗೂ ಮಕ್ಕಳ ವಿಭಾಗ, ನವಜಾತ ಶಿಶುಗಳ ತೀವ್ರನಿಗಾ ಘಟಕಗಳಿಗೆ ಭೇಟಿ ನೀಡಿದ ಅವರು ಆಸ್ಪತ್ರೆಯ ಸ್ವಚ್ಛತೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯದ ಬಗ್ಗೆ ವಿಚಾರಿಸಿದ ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿ ದೊರಕುತ್ತಿರುವ ಚಿಕಿತ್ಸೆ ಹಾಗೂ ಕುಂದು ಕೊರತೆಗಳ ಕುರಿತು ಅವರಿಂದ ಮಾಹಿತಿ ಪಡೆದುಕೊಂಡರು.
ಕಿಮ್ಸ್ ಆಸ್ಪತ್ರೆಗೆ ಹಾವೇರಿ, ಕೊಪ್ಪಳ, ಗದಗ ಹಾಗೂ ಬೆಳಗಾವಿಯಿಂದ ಚಿಕಿತ್ಸೆಗಾಗಿ ರೋಗಿಗಳು ಬರುವುದರಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯಗಳಾದ ಬೆಡ್, ಟಾಯ್ಲೆಟ್, ಕೂತುಕೊಳ್ಳುವ ಜಾಗಗಳ ಮೇಲೆ ಒತ್ತಡ ಜಾಸ್ತಿ ಇದೆ.
ಆಸ್ಪತ್ರೆಯ ಆವರಣದಲ್ಲಿ ರೋಗಗಳ ಸಂಬಂದಿಕರ ಬಳಕೆಗೆ ಅನುಕೂಲವಾಗುವಂತೆ ಸುಲಭ ಶೌಚಾಲಯ ನಿರ್ಮಾಣಕ್ಕೆ ನಿರ್ದೇಶಕರು ಮನವಿ ಮಾಡಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ತೀವ್ರತರನಾಗಿ ರಕ್ತಹೀನತೆಯಿಂದ ಬಳಲುತ್ತದ್ದ ರೋಗಿಗೆ ಹೊರಗಡೆಯಿಂದ ಇಂಜೆಕ್ಷನ್ ತರುವಂತೆ ವೈದ್ಯರು ತಿಳಿಸಿದ್ದಾಗಿ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳನ್ನು ಉಚಿತವಾಗಿ ನೀಡುಲಾಗುತ್ತದೆ. ಈ ಪ್ರಕರಣದ ಕುರಿತಂತೆ ಕಿಮ್ಸ್ ನಿರ್ದೇಶಕರು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದನೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್, ಜಿಲ್ಲಾ ಆರೋಗ್ಯಧಿಕಾರಿಗಳಾದ ಆರ್ ಎಸ್ ದೊಡ್ಡಮನಿ, ಕಿಮ್ಸ್ ಸೂಪರಿಂಟೆಂಡೆಂಟ್ ಡಾ.ರಾಮಲಿಂಗಪ್ಪ, ಮಕ್ಕಳ ತಜ್ಞ ಡಾ.ಪ್ರಕಾಶ್ ವಾರಿ, ತಹಶೀಲದಾರ ಶಶಿಧರ ಮಾಡ್ಯಾಳ ಉಪಸ್ಥಿತರಿದ್ದರು.