ಹುಬ್ಬಳ್ಳಿ prajakiran.com : ಇನ್ನೇರಡು ದಿನದಲ್ಲಿ ಮದುವೆ ಆಗಬೇಕಿದ್ದ ಪಿಎಸ್ ಐ ಒಬ್ಬರಿಗೆ ಕರೋನಾ ಪಾಸಿಟಿವ್ ಬಂದಿರುವುದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಅವರು ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣಾ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ನಿನ್ನೇ ಕರೋನಾ ಹರಡಿರುವುದು ದೃಢಪಟ್ಟಿದೆ. …
ಪಿಎಸ್ ಐ ಅವರ ಮದುವೆಗೆ ಕೇವಲ ಇನ್ನೇರಡು ದಿನ ಮಾತ್ರ ಬಾಕಿಯಿತ್ತು. ಹೀಗಾಗಿ ಅವರು ಮದುವೆಗೆ ರಜೆ ಹಾಕಿ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡದ ಮೂಲಕಬೆಳಗಾವಿಗೆ ಹೊರಟಿದ್ದರು.
ಈ ವೇಳೆ ಇಲ್ಲಿ ಓಡಾಡಿ ತಮ್ಮ ಸ್ನೇಹಿತರಿಗೆ ಭೇಟಿ ಮಾಡಿ ಮದುವೆಯ ಮಮತೆಯ ಕರೆಯೋಲೆ ನೀಡಿ ಆಹ್ವಾನಿಸಿದ್ದಾರೆ. ಹುಬ್ಬಳ್ಳಿ ಧಾರವಾಡದ ಹಲವು ಪೊಲೀಸ ಗೆಳೆಯರಿಗೆ ಮದುವೆಗೆ ಆಹ್ವಾನಿಸಿದ್ದರು.
ಮೂಲತಃ ಬೆಳಗಾವಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಅವರ ಮದುವೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆಯಬೇಕಿತ್ತು. ಮದುವೆ ಹಿನ್ನಲೆಯಲ್ಲಿ ಪಿ ಎಸ್ ಐ ಒಂದು ತಿಂಗಳು ರಜೆ ಹಾಕಿದ್ದರು.
ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ಮುನ್ನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಅವರು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಎಸ್ ಐ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ೫ ಜನರನ್ನ ಈಗಾಗಲೇ ಧಾರವಾಡ ಜಿಲ್ಲಾಡಳಿತ ಹೋಮ್ ಕ್ವಾರಂಟಿನ್ ಮಾಡಿದೆ.