ಮಂಗಳೂರು : ವೈಶ್ಯವಾಟಿಕೆ ಹಿನ್ನಲೆಯಲ್ಲಿ ಇಲ್ಲಿಯ ಸಮೃದ್ದಿ ಲಾಡ್ಜ್ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದರು. ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಈ ಲಾಡ್ಜನಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಸುದ್ದಿ ಜನರಿಂದ ಜನರಿಗೆ ಹರಡಿದ್ದರಿಂದ ಜನ ಸಾಗರವೇ ಹರಿದುಬಂತು.
ಆ ಬಳಿಕ ದಾಳಿಗಿಂತ ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸವಾಯಿತು. ಜನರನ್ನು ಅಲ್ಲಿಂದ ಸಾಗ ಹಾಕುವುದು ಹರಸಾಹಸ ಪಡಬೇಕಾಯಿತು. ಪೊಲೀಸರು ಕೊನೆಗೆ ಲಾಠಿ ರುಚಿ ತೋರಿಸಿ ಜನರನ್ನು ಚದುರಿಸಿದರು,
ಇದೇ ವೇಳೆ ಸಮೃದ್ದಿ ಲಾಡ್ಜನಲ್ಲಿ ವೈಶ್ಯವಾಟಿಕೆಯಲ್ಲಿ ತೊಡಗಿದ್ದ ಹಲವರನ್ನು ಬಂಧಿಸಿ ಪೊಲೀಸರು ಕರೆದುಕೊಂಡು ಹೋದರು.
ವಿಜಯಪುರ : ರಾಜ್ಯದ ಸಮ್ಮೀಶ್ರ ಸರಕಾರ ಶ್ರಾವಣ ಮಾಸದ ಕೊನೆಯ ಸೋಮವಾರದ ಒಳಗೆ ಪತನಗೊಳ್ಳಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸರಕಾರ ಪತನಕ್ಕೆ ಲೋಕಸಭಾ ಚುನಾವಣೆಯ ವರೆಗೆ ಕಾಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಮ್ಮೀಶ್ರ ಸರಕಾರ ಯಾವುದೇ ಕ್ಷಣದಲ್ಲೂ ಪತನವಾಗಬಹುದು ಎಂದ ಅವರು ನಂತರ ಬಿಜೆಪಿ ಸರಕಾರ ರಚನೆ ಮಾಡಲಿದ್ದು, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮತ್ತೋಮ್ಮೆ ಈ […]
ಧಾರವಾಡ: ರಾಜ್ಯಾದ್ಯಂತ ಅತಿವೃಷ್ಟಿಯಿಂದ ಹಾನಿಯಾದ ಬಗ್ಗೆ ವರದಿ ತೆಗೆದುಕೊಂಡು ಅದರ ಆಧಾರ ಮೇಲೆ ಎಲ್ಲೆಲ್ಲಿ ಏನೇನು ನಷ್ಟ ಆಗಿದೆ. ಅದನ್ನು ಸರಿಪಡಿಸಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಅವರು ಮಂಗಳವಾರ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿ ಧಾರವಾಡ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಂದಾಯ ಇಲಾಖೆಯ ಯೋಜನೆ ಮತ್ತು ಪ್ರಗತಿ ಬಗ್ಗೆ ವಿಚಾರಣೆ ನಡೆಸಿ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡುವ ಕೆಲಸ ಮಾಡಲಾಗುವುದು […]
ಬೆಳಗಾವಿ : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಉಮೇಶ್ ಕತ್ತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಮಂಗಳವಾರ ಬೆಳಗಾವಿಯ ಸುವರ್ಣ ಸೌಧದ ಎದುರು ನಾಡಿನ ವಿವಿಧ ಮಠಾಧೀಶರು ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಸ್ಪಂದನೆ ಮಾಡದ ಅವರು ನಮಗೆ ಹಗುರವಾಗಿ ಮಾತನಾಡಿದ್ದಕ್ಕೆ ಇಂದು ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡಲು ಕಾರಣವಾಗಿದೆ. ಬೆಳಗಾವಿ ಸ್ವಾಮೀಜಿಗಳ ಈ ಹೋರಾಟಕ್ಕೆ ನನ್ನ ಬೆಂಬಲ […]