ಚಿಕ್ಕಮಗಳೂರು : ಪೊಲೀಸ್ ಪೇದೆಯೊಬ್ಬ ಯುವಕನ ಮೇಲೆ ಹಲ್ಲೆ ಮಾಡಿದ್ದ ವಿಡೀಯೋ ವೈರಲ್ ಆದ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ ಆ ಪೇದೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನ ಎಂಇಎಸ್ ಕಾಲೇಜ್ ಮುಂಭಾಗದಲ್ಲಿ ಭಾನುವಾರ ಈ ಘಟನೆ ನಡೆದಿತ್ತು. ವಾಹನ ಸವಾರನೊಬ್ಬ ದಂಡ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸ ಪೇದೆ ಸುಭಾಸನೊಂದಿಗೆ ವಾಗ್ವಾದ ನಡೆಸಿದ್ದ.
ಇದರಿಂದ ರೊಚ್ಚಿಗೆದ್ದ ಪೊಲೀಸ್ ಪೇದೆ ಸಾರ್ವಜನಿಕವಾಗಿಯೇ ಆತನ ಮೇಲೆ ಗುಂಡಾಗಿರಿ ಮಾಡಿದಲ್ಲದೆ, ಮನಬಂದಂತೆ ಥಳಿಸಿದ್ದ. ಈ ವಿಡಿಯೋವನ್ನು ಸ್ಥಳೀಯರು ಚಿತ್ರಿಕರಿಸಿ ವೈರಲ್ ಮಾಡಿದ್ದರು.
ಇದರಿಂದ ಎಚ್ಚೆತ್ತ ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸಾದ ಆ ಪೇದೆ ಸುಭಾಷನನ್ನು ವಿಡಿಯೋ ಆಧಾರದ ಮೇಲೆಯೇ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಧಾರವಾಡ ಸಂಸದ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೆಫಲ್ ಯುದ್ದ ವಿಮಾನ ಖರೀದಿ ಸಂಬಂಧ ಕುರಿತು ಫ್ಯ್ರಾನ್ಸ್ದ ದೊಂದಿಗೆ ಮಾಡಿಕೊಂಡ ಒಪ್ಪಂದ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ, ಬಹಿರಂಗ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು. 2008ರ ಒಪ್ಪಂದದ ಪ್ರಕಾರ ಅತ್ಯಂತ ಮಹತ್ವದ ಶಸ್ತ್ತಾಸ್ತ್ರ ಯುದ್ದ ವಿಮಾನ ಖರೀದಿ ಇದಾಗಿರುವುದರಿಂದ ಫ್ರಾನ್ಸ್ ಸರಕಾರ ಕೂಡ […]
ಕೊಡಗು : ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಮಹಿಳೆಯರು ಬಿಸಿ ತಾಕಿಸಿದ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಪ್ರವಾಸದಲ್ಲಿರುವ ಸಿಎಂ ಹೆಚ್. ಡಿ. ಕುಮಾರಸ್ವಾಮಿಗೆ ಭಾನುವಾರ ಮಹಿಳೆಯರು ಅವರ ಕಾರ್ ತಡೆದು ತಮ್ಮ ಅಸಮಾಧಾನ ಹೊರಹಾಕಿದರು. ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆ ಗೆ ಭೇಟಿ ನೀಡಿ ತೆರಳುತ್ತಿದ್ದ ಸಿಎಂ ಕಾರು ತಡೆದ ಮಹಿಳೆಯರು ನಮ್ಮ ಬಡಾವಣೆಗೂ ಬನ್ನಿ ಸ್ವಲ್ಪ ಸಂಕಷ್ಟವನ್ನು ನೋಡಿ ಎಂದು ಪಟ್ಟು ಹಿಡಿದರು. ನಮ್ಮ ಲೇಔಟ್ ಗೆ ಬನ್ನಿ, ಸ್ವಲ್ಪ ನಮ್ಮ ಕಷ್ಟ ನೋಡಿ, […]
ಬಳ್ಳಾರಿ : ಆರ್ಥಿಕವಾಗಿ ಅಶಕ್ತ ಕುಟುಂಬಗಳಿಂದ ಬಂದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು, ವಿಪ್ರೊ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆ ಸಂತೂರ್ ಮಹಿಳಾ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ. ಮೂರನೇ ವರ್ಷದ ವಿದ್ಯಾರ್ಥಿ ವೇತನವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಜತೆಗೆ ಕರ್ನಾಟಕದ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪದವಿ ಶಿಕ್ಷಣಕ್ಕಾಗಿ ಮೂರು ರಾಜ್ಯಗಳ 900 ವಿದ್ಯಾರ್ಥಿಗಳಿಗೆ ವಾರ್ಷಿಕ 24 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ರಾಜ್ಯದ ಎಲ್ಲ ಸರ್ಕಾರಿ ಕಿರಿಯ ಕಾಲೇಜು ಪ್ರಾಚಾರ್ಯರ ಬಳಿ […]