ರಾಜ್ಯ

ಸತೀಶ ಜಾರಕಿಹೊಳಿ ಸಂಪರ್ಕಕ್ಕೂ ಸಿಗದ ರಮೇಶ್

ಬೆಳಗಾವಿ : ಕಳೆದ ಒಂದು ವಾರದಿಂದ ಯಾರ ಕೈಗೂ ಸಿಗದೆ ಓಡಾಡುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಹಿರಿಯ ಸಹೋದರ ರಮೇಶ ಜಾರಕಿಹೊಳಿಗೂ ಸಿಗದ ಓಡಾಡುತ್ತಿದ್ದಾರೆ.

ವಿಶೇಷವೆಂದರೆ ನಿನ್ನೆ ರಾತ್ರಿಯೇ ಗೋಕಾಕ್ ಪಟ್ಟಣಕ್ಕೆ ಆಗಮಿಸಿರುವ ರಮೇಶ್ ಇಂದು ಬೆಳಗ್ಗೆ ಮನೆಯಿಂದ ಹೊರ ಹೋದವರು ಮತ್ತೇ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ಹೀಗಾಗಿ ಸತೀಶ ಜಾರಕಿಹೊಳಿ ಬೆಳಗಾವಿ ಪ್ರವಾಸ ಮುಗಿಸಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಮತ್ತೇ ಮೂರು ದಿನಗಳ ಬಳಿಕ ಜಿಲ್ಲೆಗೆ ಆಗಮಿಸಿದಾಗ ಸಹೋದರನನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲೆಯ ಪ್ರವಾಸ ಕೈಗೊಂಡು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಜಿಲ್ಲೆಯ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರು ಹಾಗೂ ಸಿಎಂ ಭೇಟಿ ಮಾಡಿ ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚಿಸುತ್ತೇನೆ ಎಂದು ಹೇಳಿದರು,

ರಮೇಶ ಜಾರಕಿಹೊಳಿ ಗೋಕಾಕ್ ನಲ್ಲಿಯೇ ಇದ್ದಾರೆ. ಅವರನ್ನು ಭೇಟಿ ಮಾಡಿ ಮಾತನಾಡುವ ಕೆಲಸ ಮಾಡುತ್ತೇನೆ. ವೈಯಕ್ತಿಕ ಭೇಟಿ ಮಾಡಿಯೇ ಮಾತನಾಡುತ್ತೇನೆ. ಸಂಪರ್ಕ ಸಾಧಿಸಿದೆ ಆದರೆ ಅವರು ಲಭ್ಯವಾಗಲಿಲ್ಲ. ಮೊಬೈಲ್ ನಲ್ಲಿ ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರಯತ್ನ ಮಾಡ್ತಿನಿ ಎಂದು ಹೇಳಿದರು.

ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಇ ತುಕಾರಂ ಬಳ್ಳಾರಿಯಲ್ಲಿ ಮಾತನಾಡಿ, ರಮೇಶ್ ನಮ್ಮ ಪಕ್ಷದ ಆಸ್ತಿ. ಅವರು ಕೂಡ ವಾಲ್ಮೀಕಿ ಸಮಾಜದ ನಾಯಕರು, ಅವರು ಪಕ್ಷ ಬಿಟ್ಟು ಹೋಗಲ್ಲ. ನಮ್ಮ ನಾಯಕರು ನಾಲ್ಕು ಬಾರಿ ಶಾಸಕರು ಎರಡು ಬಾರಿ ಸಚಿವರಾಗಿದ್ದಾರೆ. ಅವರು ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಪರಿಶೀಷ್ಟ ಪಂಗಡಕ್ಕೆ ದೊಡ್ಡ ಕೊಡುಗೆ ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *