ಅಂತಾರಾಷ್ಟ್ರೀಯ

ಹಿಂಸಾಚಾರಕ್ಕೆ ತಿರುಗಿದ ಹೋರಾಟ

ಕೇರಳ : ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶ ಮಾಡಿದ ಮಹಿಳೆಯರ ನಡೆ ಖಂಡಿಸಿ ಹೋರಾಟಕ್ಕೆ ಇಳಿದಿದ್ದ ಹಿಂದೂ ಪರ ಸಂಘಟನೆಗಳ ಹೋರಾಟ ಇದೀಗ ಹಿಂಸಾಚಾರಕ್ಕೆ ತಿರುಗಿದೆ.

ತ್ರಿಶೂರ್ ನಲ್ಲಿ ಹಿಂಸಾಚಾರ ನಡೆದಿದ್ದು, ತಾಳೂಕು ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ. ಮಹಿಳೆಯರ ಪರ ತೃಪ್ತಿ ದೇಸಾಯಿ, ಬೃಂದಾ ಕಾರೆಟ್ ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ ಹೋರಾಟ ಇನ್ನಷ್ಟು ಉಲ್ಭಣಗೊಂಡಿದೆ.

ತಾಲೂಕು ಕಚೇರಿ ಪೊಲೀಸ್ ಮೇಲೆ ಹಲವು ಯುವಕರು ಹಾಗೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಹೋರಾಟದಿಂದ ಪರಿಸ್ಥೀತಿ ನಿಯಂತ್ರಿಸಲು ಪೊಲೀಸರು ಹರ ಸಾಹಸ ನಡೆಸುತ್ತಿದ್ದು, ಪರಿಸ್ಥಿತಿ ಕೈ ಮೀರಿದೆ. ಇದೇ ವೇಳೆ ಕಾಸರಗೋಡು ಬಂದ್ ಮಾಡಿ ಅನೇಕರು ಕಿಡಿ ಕಾರಿದ್ದಾರೆ. ಕೆಲವರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಲ್ಲು ತೂರಾಟ ನಡೆಸಲಾಗಿದೆ, ಅಂಗಡಿ ಮುಂಗಟ್ಟು ಬಂದ್ ಆಗಿವೆ. ಅಂಗಡಿ ಬಂದ್ ಮಾಡದ ವಿಕಲಚೇತನರ ಮೇಲೆ ಹಲ್ಲೆ ನಡೆಸಲಾಗಿದೆ.

ಇದೇ ವೇಳೆ ಬಿಜೆಪಿ ಕೇರಳ ಬಂದ್ ಗೆ ಕರೆ ನೀಡಿ ಹೋರಾಟವನ್ನು ಇನ್ನಷ್ಟು ತಿವ್ರಗೊಳಿಸಲು ಮುಂದಾಗಿದೆ. ಕೇರಳದ ಎಲ್ಲ ಕಡೆ ಈ ಹೋರಾಟಕ್ಕೆ ಇದೀಗ ಪರ ವಿರೋಧ ವ್ಯಕ್ತವಾಗಿದೆ.

Please follow and like us:

Leave a Reply

Your email address will not be published. Required fields are marked *