ಆರೋಗ್ಯ

ಗರ್ಭಿಣಿಯರ ಆರೋಗ್ಯಕ್ಕೆ ಸೀತಾಫಲ

  • ಸೀತಾಫಲ ಹಣ್ಣಿನಲ್ಲಿರುವ ಸಮೃದ್ದ ಪೋಷಕಾಂಶಗಳ ಕಾರಣಕ್ಕಾಗಿಯೇ ಈ ಹಣ್ಣುಗಳನ್ನು ಗರ್ಭಿಣಿ ಸ್ತ್ರೀಯರು ಧಾರಾಳವಾಗಿ ಸೇವಿಸಬೇಕು. ಈ ಹಣ್ಣಿನ ಸೇವನೆಯಿಂದ ಗರ್ಭಿಣಿ ಸ್ತ್ರೀಯರ ಶರೀರಕ್ಕೆ ಅವಶ್ಯವಾಗಿರುವ ಎಲ್ಲ ಶಕ್ತಿನ್ನು ಪೂರೈಸುತ್ತದೆ.
  • ಸೀತಾಫಲ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗಲು ನರವ್ಯೂಹ ಮತ್ತು ರೋಗ ನೀರೋಧಕ ಶಕ್ತಿಯು ಸುಗಮವಾಗಲು ನೆರವಾಗುತ್ತದೆ. ಇದಲ್ಲಕ್ಕಿಂತ ಮುಖ್ಯವಾಗಿ ಸೀತಾಫಲವು ಗರ್ಭಪಾತದ ಅಪಾಯವನ್ನು ತಡೆಯುವ ಸಾರ್ಮರ್ಥ್ಯವನ್ನು ಹೊಂದಿದೆ.
  • ಕಾಡಿನಲ್ಲಿ ವಾಸಿಸುವ ಜನರು ಇದರ ಎಲೆಗಳನ್ನು ಅರೆದು ಹಳೆಯ ಗಾಯಗಳಿಗೆ ಮಂದವಾಗಿ ಲೇಪಿಸುವರು. ಪ್ರಾಣಿಗಳಿಂದ ಆದ ಆಳವಾದ ಗಾಯಗಳಿಗೆ ಸಹ ಇದನ್ನೇ ಉಪಯೋಗಿಸುತ್ತಾರೆ.
  • ಹೊಟ್ಟೆಯಲ್ಲಿ ಕ್ರೀಮಿಗಳು, ಜಂತು ಹುಳಗಳಿದ್ದರೆ ಸೀತಾಫಲದ ಅಪಕ್ಕ ಕಾಯಿಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡುವುದು. ಒಂದು ಟೀ ಚಮಚ ಸೀತಾಫಲ ಚೂರ್ಣಕ್ಕೆ ಒಂದು ಟೀ ಚಮಚ ಹುರುಳಿ ಹಸಿ ಹಿಟ್ಟು ಸೇರಿಸಿ ಪ್ರತಿ ದಿವಸ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು. ಒಂದು ವಾರದ ನಂತರ ಹರಳೆಣ್ಣೆ ಭೇದಿಗೆ ಕೊಡುವುದರಿಂದ ಹೊಟ್ಟೆಯಲ್ಲಿ ಕ್ರೀಮಿಗಳು, ಜಂತುಹುಳುಗಳು ಕಡಿಮೆಯಾಗುತ್ತದೆ.
  • ತಲೆಯ ಕೂದಲುಗಳನ್ನು ಶೀಗೆ ಕಾಯಿ ಪುಡಿ ಹಾಕಿ ಬಿಸಿ ನೀರಿನಲ್ಲಿ ಶುಭ್ರವಾಗಿ ತೊಳೆದು ನಂತರ ಸೀತಾಫಲದ ಒಣಗಿದ ಬೀಜಗಳ ಚೂರ್ಣವನ್ನು ನೀರಿನಲ್ಲಿ ಕಲಿಸಿ ತಲೆಗೆ ಹಚ್ಚುವುದು. 5-6 ಗಂಟೆ ನಂತರ ಸ್ನಾನ ಮಾಡುವುದು. ಹೀಗೆ 7 ದಿನ ಮಾಡಿದರೆ ತಲೆಯಲ್ಲಿನ ಹೇನು ಮತ್ತು ಸೀರ್ ನಿವಾರಣೆಯಾಗುವುದು.
  • ಸೀತಾಫಲದ ಹಸಿ ಬೇರನ್ನು ತಂದು ಚೆನ್ನಾಗಿ ತೊಳೆದು ತಣ್ಣೀರಿನಲ್ಲಿ ತೇದ ಗಂಧವನ್ನು ಸ್ವಲ್ಪ ಜೇನಿನ ಸಮೇತ ನೆಕ್ಕುವುದರಿಂದ ಊರಿ ಮೂತ್ರ, ಮೂತ್ರ ಬಂದಾದರೆ ನಿವಾರಣೆಯಾಗುವುದು(ಅತಿಯಾಗಿ ಸೇವಿಸಬಾರದು)
  • ಪಿತ್ತದಿಂದ ಉಂಟಾದ ನವೆ ಮತ್ತು ಗಂಧೆಗಳಿಗೆ ಸೀತಾಫಲದ ಎಲೆಯನ್ನು ನುಣ್ಣಗೆ ಅರೆದು ಗಟ್ಟಿ ಮೊಸರಿನಲ್ಲಿ ಕಾಲು ಮೈಗೆ ಲೇಪಿಸುವುದರಿಂದ ಮೈ ಉರಿ, ಗಂಧೆ ತುರಿ ನಿವಾರಣೆಯಾಗುತ್ತದೆ.
  • ಮೂರ್ಛೆ ರೋಗ: ಸೀತಾಫಲದ ಬೀಜದ ಒಳಗಿನ ತಿರುಳಿನ ಚೂರ್ಣವನ್ನು ಕೆಂಡದ ಮೇಲೆ ಹಾಕಿ ಹೊಗೆಯನ್ನು ರೋಗಿಗೆ ಕೊಡುವುದರಿಂದ ಮೂರ್ಛೆರೋಗಕ್ಕೆ ರಾಮಬಾಣವಾಗಿದೆ.
  • ಸೀತಾಫಲದಲ್ಲಿ ಖನಿಜಾಂಶವಾದ ತಾಮ್ರವು ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದು ದೇಹದಲ್ಲಿ ಹಿಮಗ್ಲೋಬಿನ್ ಮಟ್ಟವನ್ನು ಸರಿಯಾಗಿಡಲು ನೆರವಾಗುತ್ತದೆ. ತಾಮ್ರದ ಕೊರತೆಯಿಂದ ಆಕಾಲಿಕ ಹೆರಿಗೆಯಾಗಬಹುದು. ತಾಮ್ರದ ಕೊರತೆಯಿಂದ ಬಿಳಿ ರಕ್ತ ಕಣಗಳು ಕಡಿಮೆಯಾಗಬಹುದು. ಗರ್ಭಿಣಿ ಮಹಿಳೆಗೆ ಪ್ರತಿ ದಿನಕ್ಕೆ 1300 ಮಿ.ಗ್ರಾಂ ನಷ್ಟು ತಾಮ್ರದ ಅವಶ್ಯಕತೆಯಿದೆ. ಅದರಿಂದ ಸೀತಾಫಲವು ಗರ್ಭಿಣಿ ಮಹಿಳೆಯರಿಗೆ ತುಂಬಾ ಲಾಭದಾಯಕ. ಇದನ್ನು ಯಾವ ರೂಪದಲ್ಲಿ ತೆಗೆದುಕೊಂಡರೂ ಇದು ಆರೋಗ್ಯಕಾರಿ.

 

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು,

Please follow and like us:

Leave a Reply

Your email address will not be published. Required fields are marked *