ಅಂತಾರಾಷ್ಟ್ರೀಯ

ಎನ್ ಸಿಪಿ ಇಬ್ಬಾಗ ಮಾಡಿದ ಬಿಜೆಪಿ ವಿರುದ್ದ ಶರದ ಪವಾರ್ ಕಿಡಿ

ಮುಂಬೈ PRAJAKIRAN.COM : ರಾತ್ರೋ ರಾತ್ರಿ ಕೆಲ ಎನ್ ಸಿ ಪಿ ಶಾಸಕರನ್ನು ಆಪರೇಶನ್ ಮಾಡಿದ ಬಿಜೆಪಿ ಮುಖಂಡರು ಮಹಾರಾಷ್ಟ್ರ ದಲ್ಲಿ ಸರಕಾರ ರಚನೆ ಮಾಡಿರುವುದು ಆಘಾತ ತಂದಿದೆ ಎಂದು ಎನ್ ಸಿಪಿ ಮುಖಂಡ ಶರದ ಪವಾರ್ ಕಿಡಿ ಕಾರಿದ್ದಾರೆ.

ಅವರು ಶನಿವಾರ ಬೆಳಗ್ಗೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಎನ್ ಸಿಪಿ ಶಾಸಕರ ನಡುವಿನ ಒಪ್ಪಂದದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಬೆಂಬಲ ನೀಡಿರುವ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ.ಇದು ಪಕ್ಷದ ನಿರ್ಣಯ ಅಲ್ಲ. ಬಿಜೆಪಿಗೆ ಬೆಂಬಲ ನೀಡಿರುವುದು ಕೇವಲ ಅಜಿತ್ ಪವಾರ್ ಅವರು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಹಮತವಿಲ್ಲ. ಇದರಲ್ಲಿ ಎನ್ ಸಿ ಪಿ ಯಾವುದೇ ಬೆಂಬಲವಿಲ್ಲ. ನಮ್ಮ ಪಕ್ಷವನ್ನುಬಿಜೆಪಿನಾಯಕರು ಇಬ್ಬಾಗ ಮಾಡಿದ್ದಾರೆ ಎಂದು ಗುಡುಗಿದರು.

ಈ ವೇಳೆ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ಶರದ ಪವಾರ್ ಅವರಿಗೆ ಪೋನ್ ಮಾಡಿ ಮಾತನಾಡಿದ್ದಾರೆ. ಈ ಬೆಳವಣಿಗೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Please follow and like us:

Leave a Reply

Your email address will not be published. Required fields are marked *