ಬೆಂಗಳೂರು : ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ಹಿರಿಯ ನಟ ಅರ್ಜುನ ಸರ್ಜಾ ಅವರು ನಡೆಸಿದ ಲೈಂಗಿಕ ಕಿರುಕುಳದ ವಿರುದ್ದ ಕೊನೆಗೂ ಮೌನ ಮುರಿದ ನಟಿ ಶೃತಿ ಹರಿಹರನ್ ಕಾನೂನು ಸಮರದ ಎಚ್ಚರಿಕೆ ನೀಡಿದ್ದಾರೆ.
ಅವರು ಭಾನುವಾರ ಬೆಂಗಳೂರಿನಲ್ಲಿ ರೇಣುಕಾಂಬ ಚಿತ್ರಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಎಳೆ ಎಳೆಯಾಗಿ ವಿವರ ಬಿಚ್ಚಿಟ್ಟರು.
ಅರ್ಜುನ ಸರ್ಜಾ ವಿರುದ್ದ ಆ ಕೂಡಲೇ ನಾನು ಚಿತ್ರದ ನಿರ್ದೇಶಕರಿಗೆ ದೂರು ನೀಡಿದ್ದೆ. ನನ್ನ ಸಿಬ್ಬಂದಿಗೆ ಹೇಳಿದ್ದೆ. ನಾನು ಈ ಘಟನೆ ನಡೆದ ತಕ್ಷಣ ಗಲಿಬಿಲಿಗೊಂಡಿದ್ದೆ. ಅದರಿಂದ ಹೊರಬಂದು ನಾನು ಈಗ ಒಂದೂವರೆ ವರ್ಷದ ನಂತರ ಹೇಳುತ್ತಿದ್ದೇನೆ. ನನಗೆ ಆಗ ಧೈರ್ಯ ಇರಲಿಲ್ಲ. ಮೀ ಟೂ ಅಭಿಯಾನದಿಂದ ಅಧೈರ್ಯದಿಂದ ಹೊರಬಂದು ಈಗ ಹೇಳಿದ್ದೇನೆ ಎಂದರು.
ಚಿತ್ರದ ಶೂಟಿಂಗ್ ಮುಗಿದ ನಂತರ ಮಾತಿನಲ್ಲಿ ಡಿನ್ನರ್ ಗೆ ಬರಕ್ಕೆ ಕೇಳಿದ್ದರು. ನನಗೆ ನಟ ದರ್ಶನ ಆಗಲಿ, ಸುದೀಪ್ ಆಗಲಿ ಯಾರೂ ಅಬ್ಯೂಸ್ ಮಾಡಿಲ್ಲ. ತಪ್ಪಾಗಿ ನಡೆದುಕೊಂಡಿಲ್ಲ. ಅರ್ಜುನ್ ಸರ್ಜಾ ಅವರು ಮಾಡಿದ್ದು ತಪ್ಪು, ಅರ್ಜುನ್ ಸರ್ಜಾ ಅವರ ಕಾನೂನು ಸಮರ ಎದುರಿಸುತ್ತೇನೆ ಎಂದರು.
ನಾನು ಅರ್ಜುನ ಸರ್ಜಾ ಅವರ ಮೇಲೆ ಆರೋಪ ಮಾಡಿದ ಮೇಲೆ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ಟ್ರೂ ಕಾಲರ್ ಮೂಲಕ ತಪಾಸಣೆ ಮಾಡಿದಾಗ ಸರ್ಜಾ ಫಾನ್ಸ್ ಕಾಲ್ ಬಂದಿವೆ. ಅವುಗಳ ವಿರುದ್ದ ಕಾನೂನು ಸಮರ ಸಾರುತ್ತೇನೆ. ಅದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ದಾಖಲೆಗಳಿವೆ, ಆಧಾರಗಳಿವೆ. ತಬ್ಬಿಕೊಂಡಿದ್ದು ಪೊಟೋ ಇದೆ ಎಂದು ಸಮರ್ಥಿಸಿಕೊಂಡರು.
ಈ ಹೇಳಿಕೆಯಿಂದ ನನಗೆ ಕನ್ನಡ ಸಿನಿಮಾದಲ್ಲಿ ಹಿಂಜರಿಕೆ ಆಗುತ್ತದೆ ಎನ್ನು ಅನುಮಾನ ಇಲ್ಲ. ಅಲ್ಲದೆ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಷಯವೂ ಅಲ್ಲ. ಇದನ್ನು ಫೈರ್ ಸಂಸ್ಥೆಯ ಐಸಿಸಿ ವಿಭಾಗದಿಂದ ಕಾನೂನು ಸಮರ ಮುಂದುವರೆಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕಿ ಕವಿತಾ ಲಂಕೇಶ್, ರೂಪದರ್ಶಿ ರೂಪಾ ಅಯ್ಯರ್, ನಟ ಚೇತನ ಸೇರಿ ಅನೇಕರು ನಟಿ ಶೃತಿ ಹರಿಹರನ್ ಅವರ ಮೀ ಟೂ ಅಭಿಯಾನದ ಜೊತೆಗೆ ಕೈ ಜೋಡಿಸಿದ್ದಾರೆ.