ಬೆಂಗಳೂರು : ವಿಸ್ಮಯ ಚಲನ ಚಿತ್ರದ ನಾಯಕಿ ಶೃತಿ ಹರಿಹರನ್ ಕೊನೆಗೂ ಬಹುಭಾಷೆ ನಟ ಅರ್ಜುನ ಸರ್ಜಾ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.
ಈ ಕುರಿತು ಶನಿವಾರ ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಕೀಲ ಅನಂತ ನಾಯ್ಕ ಜೊತೆಗೆ ಆಗಮಿಸಿದ ಅವರು ನಟ ಅರ್ಜುನ ಸರ್ಜಾ ಅವರು ನನ್ನೊಂದಿಗೆ ಯು ಬಿ ಸಿಟಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದಾಖಲಿಸಿದ್ದಾರೆ.
ಅವರು ಪಬ್ ವೊಂದರಲ್ಲಿ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಆಗ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೆ, ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದರು.
ಅಲ್ಲದೆ, ಅವರು ನನ್ನನ್ನೂ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ್ದಾರೆ. ದೇವನಹಳ್ಳಿ ಬಳಿ ನಾನು ಕಾರಿನಲ್ಲಿ ಹೋಗುವಾಗ ಹಿಂದೆ ಬಂದಿದ್ದರು. ಸಿನಿಮಾ ಸೆಟ್ ದಲ್ಲಿ ಕೂಡ ಇದೇ ರೀತಿ ವರ್ತಿಸುತ್ತಿದ್ದರು ಎಂದು ವಿವರಿಸಿದ್ದಾರೆ.
ಹೀಗಾಗಿ ಇದೀಗ ನಟ ಅರ್ಜುನ ಸರ್ಜಾ ಹಾಗೂ ಶೃತಿ ಹರಿಹರನ್ ವಿರುದ್ದ ಸಮರಕ್ಕೆ ವೇದಿಕೆ ಸಜ್ಜಾಗಿದಂತೆ ಕಂಡು ಬರುತ್ತಿದೆ.