ಶಿವಮೊಗ್ಗ prajakiran.com : ರಾಜ್ಯದ್ಯಂತ ಸೋಮವಾರದಿಂದ ಬಹುತೇಕ ದೇವಾಲಯಗಳು ಓಪನ್ ಆಗಲಿದ್ದು, ಅದಕ್ಕಾಗಿ ಈಗಾಗಲೇ ಕೆಲವು ದೇವಸ್ಥಾನಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.
ಅದರಲ್ಲೂ ವಿಶೇಷವಾಗಿ ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಸುಬ್ರಮಣ್ಯ, ಬಾದಾಮಿಯ ಬನಶಂಕರಿ ದೇವಾಲಯಗಳು ಸಜ್ಜಾಗುತ್ತಿದ್ದರೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ತಾಯಿ ದರ್ಶನ ಸದ್ಯಕ್ಕೆ ಸಿಗುವುದಿಲ್ಲ.
ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಜೂನ್ 15 ನಂತರ ತೆರೆಯಲು ಹಾಗೂ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ.
ಚೌಡೇಶ್ವರಿ ತಾಯಿ ದೇವಾಲಯಕ್ಕೆ ಹೆಚ್ಚಾಗಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಬೆಂಗಳೂರು ಭಾಗದ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಜನರು ಹರಿದು ಬರುತ್ತಾರೆ. ಹೀಗಾಗಿ ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಿರುವ ಕಾರಣ ದೇವಸ್ಥಾನ ತೆರೆಯಲು ಆಡಳಿತ ಮಂಡಳಿ ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಜೂನ್ 15 ನಂತರ ತೆರೆಯಲು ಹಾಗೂ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಚೌಡೇಶ್ವರಿ ತಾಯಿ ದೇವಾಲಯದ ಸದ್ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದೆ.
ರಾಜ್ಯದ ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ದೇವಸ್ಥಾನಗಳು ಹಾಗೂ ಆಡಳಿತಮಂಡಳಿಗಳು ಜೂನ್ 8ರಿಂದ ಸೋಮವಾರದಿಂದ ಆರಂಭವಾಗಲಿವೆ.
ದೇವಾಲಯಗಳ ರೂಪುರೇಷೆ ನೋಡಿಕೊಂಡು ದೇವಾಲಯ ತೆರೆಯಲು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಸದ್ಯಕ್ಕೆ ಪ್ರತಿದಿನ ಚೌಡೇಶ್ವರಿ ತಾಯಿಗೆ ಅರ್ಚಕರಿಂದ ಪೂಜೆ, ಪ್ರಸಾದ ನಡೆಯುತ್ತಿದೆ.