ಚಾಮರಾಜನಗರ : ಇಲ್ಲಿಯ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದ ವತಿಯಿಂದ ವಾರ್ಷಿಕ ಸಾಂಸ್ಕಂತಿಕ ಹಾಗೂ ಕ್ರೀಡಾಕೂಟ ನಡೆಯಿತು.
ಸಂಸ್ಥೆಯ ನೂರಾರು ಸಿಬ್ಬಂದಿ ಉತ್ಸಾಹದಿಂದ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ನಕ್ಕು ನಲಿದರು. ಅಲ್ಲದೆ, ತಮ್ಮ ಕ್ರೀಡಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. ಮಹಿಳಾ ನೌಕರರು ಕೂಡ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.
ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ಕುಮಾರ್ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಡಿ.ಎಂ.ಇ) ಮಲ್ಲೇಶ್, ಉಗ್ರಾಣಾಧಿಕಾರಿ ಚಂದ್ರಮೌಳಿ, ಲೆಕ್ಕಾಧಿಕಾರಿ ಅರ್.ಬಿ.ರುದ್ರಮುನಿ, ವ್ಯವಸ್ಥಾಪಕರು ನಂಜನಗೂಡುಸ ಮಹದೇವಸ್ವಾಮಿ, ಕಾರ್ಮಿಕ ಕಲ್ಯಾಣಾಧಿಕಾರಿ ಎಂ.ರಶ್ಮಿ, ಸೇರಿದಂತೆ ಅನೇಕರು ಇದಕ್ಕೆ ಸಾಕ್ಷಿಯಾದರು.
ಲಂಡನ್: ಭಾರತ ಕ್ರಿಕೆಟ್ ತಂಡದ ಸದಸ್ಯರೊಡನೆ ಅನುಷ್ಕಾ ಶರ್ಮಾ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅನೇಕರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಕಾಲೆಳೆದಿದ್ದಾರೆ. ಅವರು ಭಾರತ ಕ್ರಿಕೆಟ್ ತಂಡ ನಾಯಕ ಬಳಿಕ ಇರಬೇಕಾದ ಉಪನಾಯಕನನ್ನು ಹಿಂದೆ ಸರಿಸಿ, ಆ ಸ್ಥಳದಲ್ಲಿ ಅವರು ನಿಂತಿರುವುದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಯಾವಾಗ ಉಪನಾಯಕರಾಗಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಅವರ ಸ್ಥಾನದಲ್ಲಿ ನಿಂತು […]
ಜಕಾರ್ತ್ : ಏಷ್ಯನ್ ಗೇಮ್ಸ್ ನಲ್ಲಿ ಬುಧವಾರ ವಿಶ್ವ ದಾಖಲೆ ಬರೆಯುವ ಮೂಲಕ ಇಡೀ ಜಗತ್ತು ಭಾರತದತ್ತ ನೋಡುವಂತೆ ಮಾಡಿದೆ. ಹಾಕಾಂಗ್ ವಿರುದ್ದ ನಡೆದ ಪಂದ್ಯದಲ್ಲಿ ಭಾರತವು 26-0 ಅಂತರದಿಂದ ಗೆಲುವು ದಾಖಲಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ 1932ರಲ್ಲಿ ನಡೆದ ಒಲಂಪಿಕ್ ನಲ್ಲಿ ಅಮೆರಿಕ ವಿರುದ್ದ 24-0 ಅಂತರದಿಂದ ಗೆದ್ದಿದ್ದ ಐತಿಹಾಸಿಕ ದಾಖಲೆಯನ್ನು 86 ವರ್ಷಗಳ ಬಳಿಕ ಭಾರತ ತಂಡವೇ ಭಾರತದ ದಾಖಲೆಯನ್ನು ಮುರಿದಿದೆ. Share on: […]
ಟ್ರೆಂಟ್ ಬ್ರಿಡ್ಜ್ : ಸತತ ಎರಡು ಟೆಸ್ಟ್ ಗಳಲ್ಲಿ ಸೋಲು ಕಂಡಿದ್ದ ಭಾರತದ ಕ್ರಿಕೆಟ್ ತಂಡ ಮೂರನೇ ಪಂದ್ಯದಲ್ಲಿ ಫೀನಿಕ್ಸ್ ನಂತೆ ಎದ್ದು ಬರುವ ಮೂಲಕ ಗೆಲುವನ್ನು ದಾಖಲಿಸಿದೆ. ಆ ಗೆಲುವನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೇವರ ನಾಡು ಕೇರಳದ ಸಂತ್ರಸ್ತರಿಗೆ ಸಮರ್ಪಣೆ ಮಾಡಿದ್ದಾರೆ. ಆ ಮೂಲಕ ಅವರ ನೋವಿನಲ್ಲೂ ನಾವಿದ್ದೇವೆ. ಮತ್ತೇ ಕೇರಳ ಮೊದಲಿನಂತಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡಕ್ಕೆ […]